ಮಾನಸಿಕ ಅಸ್ವಸ್ಥೆಯ ಮೇಲೆ ಕಾಮತೃಷೆ ತೀರಿಸಿದ ದುರುಳರು

ಮಂಗಳವಾರ, 25 ಆಗಸ್ಟ್ 2020 (09:23 IST)
ಅಹಮ್ಮದಾಬಾದ್: 21 ವರ್ಷದ ಮಾನಸಿಕ ಅಸ್ವಸ್ಥೆಯ ಮೇಲೆ ಆಗಸ್ಟ್ 15 ರಂದು ಐವರು ಕಾಮುಕರು ಸಾಮೂಹಿಕ ಮಾನಭಂಗ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


ಸಂತ್ರಸ್ತೆ ತನ್ನ ತಾಯಿಯನ್ನು ನೋಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಟೋ ರಿಕ್ಷಾ ಏರಿದ್ದ ಯುವತಿಯನ್ನು ಕಾಮುಕರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ಕೃತ್ಯವೆಸಗಿದ್ದಾರೆ. ಬಳಿಕ ಆಕೆಯ ಮನೆ ಬಳಿ ತಂದುಬಿಟ್ಟಿದ್ದಾರೆ. ಆರೋಪಿಗಳಲ್ಲಿ ಒಬ್ಬಾತ ಅಹಮ್ಮದಾಬಾದ್ ನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ