ಭಾರತದ ಭೂಪಟ ತಪ್ಪಾಗಿ ಬಿಂಬಿಸಿದಲ್ಲಿ 100 ಕೋಟಿ ದಂಡ, 7 ವರ್ಷ ಜೈಲು

ಶುಕ್ರವಾರ, 6 ಮೇ 2016 (16:07 IST)
ಭಾರತದ ಭೂಪಟವನ್ನು ತಪ್ಪಾಗಿ ಬಿಂಬಿಸುವಂತವರಿಗೆ 7 ವರ್ಷ ಜೈಲು ಶಿಕ್ಷೆ ಜೊತೆಗೆ 100 ಕೋಟಿ ರೂಪಾಯಿ ಮೊತ್ತದವರಿಗೆ ದಂಡ ಪಾವತಿಸಬೇಕಾಗುತ್ತದೆ. 

ಸಾಮಾಜಿಕ ಜಾಲತಾಣಗಳು ಜಮ್ಮು ಕಾಶ್ಮೀರ್ ಮತ್ತು ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾ ಗಡಿ ಭಾಗದ ಪ್ರದೇಶವೆಂದು ಬಿಂಬಿಸಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಚಿಂತನೆ ನಡಿಸಿದೆ.
 
ಭಾರತ ಭೂ ಪ್ರದೇಶದ ಕುರಿತು ಯಾವುದೇ ವಿಷಯಗಳನ್ನು ಪ್ರಕಟಿಸುವ ಮುನ್ನ ಸರಕಾರ ಪ್ರಾಧಿಕಾರದ ಅನುಮತಿ ಪಡೆಯಬೇಕಾದದ್ದು ಕಡ್ಡಾಯವಾಗಿದೆ. 
 
ಮೈಕ್ರೋಬ್ಲಾಗಿಂಗ್ ಸೇವೆ ನೀಡುತ್ತಿರುವ ಟ್ವಿಟರ್, ಕಳೆದ ಕೆಲವು ದಿನಗಳ ಹಿಂದೆ ಜಮ್ಮು ಭೂ ಪ್ರದೇಶವನ್ನು ಪಾಕಿಸ್ಥಾನದ ಭಾಗವಾಗಿ ಕಾಶ್ಮೀರ ಭೂ ಪ್ರದೇಶವನ್ನು ಚೀನಾದ ಭಾಗವಾಗಿ ಚಿತ್ರಿಸಿದ್ದವು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ