ಹೊಸ ವರ್ಷದಂದೇ ರಸ್ತೆ ಅಪಘಾತದಲ್ಲಿ 8 ಮಂದಿ ಸಾವು
ಸೋಮವಾರ, 2 ಜನವರಿ 2023 (14:21 IST)
ಜೈಪುರ : ಹೊಸ ವರ್ಷಾಚರಣೆಯಂದು ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 8 ಮಂದಿ ದಾರುಣ ಸಾವಿಗೀಡಾಗಿದ್ದಾರೆ.
ರಾಜ್ಯದ ಸಿಕಾರ್ನ ಪಲ್ಸಾನಾ ರಸ್ತೆಯಲ್ಲಿ ಮೋಟಾರ್ಸೈಕಲ್ ಮತ್ತು ಟ್ರಕ್ಗೆ ಪಿಕಪ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಮಾರು 14 ಪ್ರಯಾಣಿಕರಿದ್ದ ಪಿಕಪ್ ವಾಹನ ಮಧ್ಯಾಹ್ನ 3:30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು 14 ಪ್ರಯಾಣಿಕರಿದ್ದ ಪಿಕಪ್ ಟ್ರಕ್ ತನಗೆ ಎದುರು ಬರುತ್ತಿದ್ದ ಟ್ರಕ್ ಮತ್ತು ಬೈಕ್ಗೆ ಡಿಕ್ಕಿ ಹೊಡೆದಿದೆ. ಐವರು ಪುರುಷರು ಮತ್ತು ಮೂರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ಒಂಭತ್ತು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಕರ್ ಎಎಸ್ಪಿ ರತನ್ ಲಾಲ್ ಭಾರ್ಗವ ತಿಳಿಸಿದ್ದಾರೆ.