ಸ್ಪೈಸ್‌ ಜೆಟ್‌ನ 80 ಪೈಲಟ್ ಮನೆಗೆ !

ಗುರುವಾರ, 22 ಸೆಪ್ಟಂಬರ್ 2022 (09:20 IST)
ಮುಂಬೈ : ಸ್ಪೈಸ್ ಜೆಟ್ ಏರ್ಲೈನ್ ಇಂದು ಏಕಾ ಏಕಿ ತನ್ನ 80 ಪೈಲಟ್ಗಳನ್ನು ಯಾವುದೇ ವೇತನವಿಲ್ಲದೇ ಮೂರು ತಿಂಗಳ ಕಾಲ ದೀರ್ಘ ರಜೆಯಲ್ಲಿರುವಂತೆ ಸೂಚಿಸಿದೆ.

ಸ್ಪೈಸ್ಜೆಟ್ ಹೆಚ್ಚಿನ ಸಂಖ್ಯೆಯ ಪೈಲಟ್ಗಳನ್ನು ಹೊಂದಿದ್ದು, ನಿರ್ವಹಣಾ ವೆಚ್ಚ ಸರಿದೂಗಿಸಲು ತಾತ್ಕಾಲಿಕವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮದಲ್ಲಿರುವ ಪ್ರಧಾನ ಕಚೇರಿಯ ವಿಮಾನಯಾನ ಸಂಸ್ಥೆ ತಿಳಿಸಿದೆ.

ಬೋಯಿಂಗ್-737 ವಿಭಾಗದ 40 ಪೈಲಟ್ಗಳು ಹಾಗೂ ಕ್ಯೂ-400 ವಿಭಾಗದ 40 ಪೈಲಟ್ಗಳು ಸೇರಿ ಒಟ್ಟು 80 ಪೈಲಟ್ಗಳನ್ನು ಧೀರ್ಘ ರಜೆ ಮೇಲೆ ಮನೆಗೆ ತೆರಳುವಂತೆ ಸೂಚಿಸಿದೆ.

ಡಿಸೆಂಬರ್ನಲ್ಲಿ 7 ಹೊಸ ಬೋಯಿಂಗ್ 737 ಮ್ಯಾಕ್ಸ್ ಅನ್ನು ಸೇರಿಸಲು ಏರ್ಲೈನ್ ಮುಂದಾಗಿದ್ದು, ಹೊಸ ಮಾರ್ಗದ ಹಾರಾಟ ಶುರು ಮಾಡಿದರೆ ಈ ಪೈಲಟ್ಗಳನ್ನು ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ