ಚಂಡೀಗಢ : ಪಂಜಾಬ್ನಲ್ಲಿ ಗನ್ ಸಂಸ್ಕೃತಿ ವಿರುದ್ಧ ಭಗವಂತ್ ಮಾನ್ ನೇತೃತ್ವದ ಸರ್ಕಾರ ಪ್ರಮುಖ ಕ್ರಮವನ್ನು ಕೈಗೊಂಡಿದ್ದು, ರಾಜ್ಯದಲ್ಲಿ 813 ಬಂದೂಕುಗಳ ಪರವಾನಗಿಯನ್ನು ರದ್ದುಗೊಳಿಸಿದೆ.
ಭಗವಂತ್ ಮಾನ್ ಸರ್ಕಾರವು ಲೂಧಿಯಾನ ಗ್ರಾಮಾಂತರದಿಂದ 87, ಶಹೀದ್ ಭಗತ್ ಸಿಂಗ್ ನಗರದಿಂದ 48, ಗುರುದಾಸ್ಪುರದಿಂದ 10, ಫರೀದ್ಕೋಟ್ನಿಂದ 84, ಪಠಾಣ್ಕೋಟ್ನಿಂದ 199, ಹೋಶಿಯಾಪುರದಿಂದ 47, ಕಪುರ್ತಲಾದಿಂದ 6, ಎಸ್ಎಎಸ್ ಕಸ್ಬಾದಿಂದ 235 ಮತ್ತು ಸಂಗ್ರೂರ್ನಿಂದ 16 ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.
ಅಮೃತಸರ ಕಮಿಷನರೇಟ್ನ 27 ಮತ್ತು ಜಲಂಧರ್ ಕಮಿಷನರೇಟ್ನ 11 ಮತ್ತು ಇತರ ಹಲವು ಜಿಲ್ಲೆಗಳ ಶಸ್ತ್ರಾಸ್ತ್ರ ಪರವಾನಗಿಯನ್ನು ಸಹ ರದ್ದುಗೊಳಿಸಲಾಗಿದೆ. ಪಂಜಾಬ್ ಸರ್ಕಾರ ಇದುವರೆಗೆ 2,000 ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಗೊಳಿಸಿದೆ.