ಬೆಳ್ಳಂಬೆಳಗ್ಗೆ ಪಂಜಾಬ್‌ನಲ್ಲಿ ತೀವ್ರತೆಯ ಭೂಕಂಪ!

ಸೋಮವಾರ, 14 ನವೆಂಬರ್ 2022 (11:59 IST)
ಚಂಡೀಗಢ : ಪಂಜಾಬ್ನ ಅಮೃತಸರದಲ್ಲಿ ಸೋಮವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭಾರತದ ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
 
ಮುಂಜಾನೆ 3:42ರ ವೇಳೆಗೆ ಪಂಜಾಬ್ನ ಅಮೃತಸರದಲ್ಲಿ ಭೂಕಂಪ ಉಂಟಾಗಿದ್ದು, ಅದರ ಕೇಂದ್ರ ಬಿಂದುವನ್ನು ನೆಲದಿಂದ 120 ಕಿ.ಮೀ ಆಳದಲ್ಲಿ ಪತ್ತೆಹಚ್ಚಲಾಗಿದೆ.

ಕಳೆದ ಕೆಲ ದಿನಗಳಿಂದ ಉತ್ತರ ಭಾರತದಾದ್ಯಂತ ಒಂದಾದಮೇಲೊಂದರಂತೆ ಭೂಕಂಪಗಳು ಸಂಭವಿಸುತ್ತಲೇ ಇದೆ. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಭಾನುವಾರ ದೆಹಲಿ-ಎನ್ಸಿಆರ್ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದೆ.

ನ್ಯೂ ತೆಹ್ರಿ, ಪಿಥೋರಗಢ, ಬಾಗೇಶ್ವರ್, ಪೌರಿ ಹಾಗೂ ಇತರ ನಗರಗಳು ಸೇರಿದಂತೆ ಉತ್ತರಾಖಂಡದ ಕೆಲ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ