ಉತ್ತರ ಪ್ರದೇಶದಲ್ಲಿ ಶೀತಗಾಳಿಗೆ 9 ಬಲಿ

ಶನಿವಾರ, 14 ಜನವರಿ 2017 (15:50 IST)
ಉತ್ತರ ಭಾರತದಲ್ಲಿ ಕೊರೆಯುವ ಚಳಿ ಮುಂದುವರೆದಿದ್ದು, ಶೀತಗಾಳಿಯ ಹೊಡೆತಕ್ಕೆ ಇಲ್ಲಿಯವರೆಗೆ 9 ಜನರು ಸಾವನ್ನಪ್ಪಿದ್ದಾರೆ. ಮುಂದಿನ ಕೆಲ ದಿನಗಳ ಕಾಲ ಚಳಿ ಇದೇ ರೀತಿಯಲ್ಲಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಪರೀತ ಚಳಿ ಹಿನ್ನೆಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ ಜನವರಿ 16ರವರೆಗೆ ರಜೆ ಘೋಷಿಸಲಾಗಿದೆ. 
 
ಜನವರಿ 19ರವರೆಗೆ ಇದೇ ರೀತಿಯಲ್ಲಿ ಶೀತಗಾಳಿ ಮುಂದುವರೆಯಲಿದೆ ಎಂದು ವಹಾಮಾನ ಇಲಾಖೆ ತಿಳಿಸಿದೆ, ಲಕ್ನೋದಲ್ಲಿ ಉಷ್ಣಾಂಶ 0.4 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಕಳೆದ ಹಲವು ವರ್ಷಗಳಲ್ಲಿ ನಗರ ಕಂಡ ಅತ್ಯಂತ ಕಡಿಮೆ ಉಷ್ಣಾಂಶವಾಗಿದೆ.
 
ಕಾನ್ಪುರ ಮತ್ತು ಸುಲ್ತಾನಪುರದಲ್ಲಿ 1.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
 
ಶೀತಗಾಳಿಯಿಂದ ಮೃತಪಟ್ಟವರು ಕನೌಜ್ ಮತ್ತು ಕಾನ್ಪುರ್ ಗ್ರಾಮೀಣ ಪ್ರದೇಶದವರಾಗಿದ್ದಾರೆ.
 

ವೆಬ್ದುನಿಯಾವನ್ನು ಓದಿ