ಮೊಬೈಲ್ ಬೇಕೆಂದು ರಕ್ತ ಮಾರಲು ಹೋದ 16ರ ಹುಡುಗಿ!

ಗುರುವಾರ, 20 ಅಕ್ಟೋಬರ್ 2022 (11:57 IST)
ಕೋಲ್ಕತ್ತಾ : ಮೊಬೈಲ್ ಖರೀದಿಸಲು ಹಣ ಬೇಕೆಂದು 16 ವರ್ಷದ ಹುಡುಗಿಯೊಬ್ಬಳು ರಕ್ತವನ್ನು ಮಾರಾಟ ಮಾಡಲು ಹೋದ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ದಕ್ಷಿಣ ದಿನಾಜ್ಪುರದ ತಪನ್ ಪೊಲೀಸ್ ಠಾಣೆಯ ಕರ್ದಾ ನಿವಾಸಿಯಾಗಿರುವ ಆಕೆ 12ನೇ ತರಗತಿ ಓದುತ್ತಿದ್ದಾಳೆ. ಆಕೆ ಆನ್ಲೈನ್ಲ್ಲಿ 9,000 ರೂ. ಮೌಲ್ಯದ ಸ್ಮಾರ್ಟ್ಫೋನ್ ಅನ್ನು ಆರ್ಡರ್ ಮಾಡಿದ್ದಳು. ಆದರೆ ಆಕೆಯ ಬಳಿ ಅಷ್ಟೊಂದು ಹಣವಿರಲಿಲ್ಲ.

ಇದರಿಂದಾಗಿ ಆಕೆ ಬಲೂರ್ಘಾಟ್ನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು ಕೊಡಲು ನಿರ್ಧರಿಸಿದ್ದಾಳೆ. ಈ ಹಿನ್ನೆಲೆಯಲ್ಲೇ ಆಕೆ ಆಸ್ಪತ್ರೆಗೆ ತೆರಳಿ ಅಲ್ಲಿ, ರಕ್ತ ನೀಡುತ್ತೇನೆ ಅದರ ಬದಲು ಎಷ್ಟು ಹಣ ನೀಡುತ್ತೀರಿ ಎಂದು ಕೇಳಿದ್ದಾಳೆ. ಇದರಿಂದ ಅಲ್ಲಿನ ಉದ್ಯೋಗಿಗಳು ಅನುಮಾನಗೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ