ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಬೇಕು :ವಿಶ್ವ ಆರೋಗ್ಯ ಸಂಸ್ಥೆ

ಮಂಗಳವಾರ, 4 ಏಪ್ರಿಲ್ 2023 (13:03 IST)
ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿರುವವರಿಗೆ, ಆರೋಗ್ಯಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ಸಮಿತಿ ಸಲಹೆ ನೀಡಿದೆ.
 
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳು, ರಕ್ಷಣಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು. ಒಂದು ವೇಳೆ ಇವರು ಕೋವಿಡ್ಗೆ ತುತ್ತಾದರೆ ಹೆಚ್ಚಿನ ತೊಂದರೆ ಎದುರಿಸ ಬೇಕಾಗಬಹುದು ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.

9 ಮಂದಿ ಬಲಿ

ಕೋವಿಡ್ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು ಶನಿವಾರ 2994 ಪ್ರಕರಣಗಳು ದಾಖಲಾಗಿವೆ. 9 ಮಂದಿ ಸಾವಿಗೀಡಾಗಿದ್ದಾರೆ. ಕೋವಿಡ್ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕಡಿಮೆ ಇರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,354ಕ್ಕೆ ಏರಿದೆ.

ಪಾಸಿಟಿವಿಟಿ ದರ ಅಪಾಯಕಾರಿ ಮಟ್ಟ ಶೇ.2.09ರಷ್ಟು ದಾಖಲಾಗಿದೆ. ಈ ನಡುವೆ ದೆಹಲಿಯಲ್ಲಿ 416 ಪ್ರಕರಣ ದಾಖಲಾಗಿದ್ದು, 7 ತಿಂಗಳಲ್ಲಿ ಗರಿಷ್ಠ ಪ್ರಮಾಣವಾಗಿದೆ. ಮುಂಬೈನಲ್ಲಿ 669 ಪ್ರಕರಣಗಳು ದಾಖಲಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ