ಭಾರತದ ಕೆಮ್ಮಿನ ಸಿರಪ್ ಬಳಸಬೇಡಿ : WHO

ಗುರುವಾರ, 12 ಜನವರಿ 2023 (11:14 IST)
ತಾಷ್ಕೆಂಟ್ : ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಕಂಪನಿ ತಯಾರಿಸಿದ 2 ಕೆಮ್ಮಿನ ಸಿರಪ್ಗಳನ್ನು ಉಜ್ಬೇಕಿಸ್ತಾನದಲ್ಲಿರುವ ಮಕ್ಕಳಿಗೆ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ.

ಮೆರಿಯನ್ ಬಯೋಟೆಕ್ನಿಂದ ತಯಾರಿಸಲ್ಪಟ್ಟ ಗುಣ್ಣಮಟ್ಟದ ವೈದ್ಯಕೀಯ ಉತ್ಪನ್ನಗಳನ್ನು ಪೂರೈಸಲು ವಿಫಲವಾಗಿದೆ.

ಇದರಿಂದಾಗಿ ಮರಿಯನ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತಯಾರಿಸಿರುವ ಅಬ್ರೊನಾಲ್ ಮತ್ತು ಡಾಕ್-1 ಮ್ಯಾಕ್ಸ್ ಕೆಮ್ಮು ಸಿರಪ್ ತೆಗೆದುಕೂಳ್ಳದಂತೆ ಡಬ್ಲ್ಯುಎಚ್ಒ ಸೂಚಿಸಿದೆ.

ಇಲ್ಲಿಯವರೆಗೆ ಔಷಧಿಯ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಮರಿಯನ್ ಬಯೋಟೆಕ್ ಯಾವುದೇ ಖಾತ್ರಿಯನ್ನು ನೀಡಿಲ್ಲ ಎಂದು ಉಲ್ಲೇಖಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ