ಹವಾ ಕ್ರಿಯೇಟ್ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಖ್ಯಾತ ಯೂಟ್ಯೂಬರ್

Sampriya

ಶುಕ್ರವಾರ, 2 ಆಗಸ್ಟ್ 2024 (19:17 IST)
Photo Courtesy X
ಉತ್ತರಪ್ರದೇಶ:  ರೈಲ್ವೆ ಹಳಿಗಳಲ್ಲಿ ಅಪಾಯಕಾರಿ ಸ್ಟಂಟ್ ಮಾಡಲು ಹೋಗಿ ಇಲ್ಲಿನ ಖ್ಯಾತ ಯೂಟ್ಯೂಬರ್‌ ಗುಲ್ಶನ್ ಶೇಖ್ ಅವರು ಪೊಲೀಸರ ಅತಿಥಿಯಾಗಿದ್ದಾನೆ.

ಅಪಾಯಕಾರಿ ಸ್ಟಂಟ್‌ಗಳಿಗೆ ಹೆಸರುವಾಸಿಯಾದ ಜನಪ್ರಿಯ ಯೂಟ್ಯೂಬರ್ ಗುಲ್ಶನ್ ಶೇಖ್ ಅವರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಶೇಖ್ ಅವರು ನಿರ್ವಹಿಸುತ್ತಿರುವ 'ಗುಲ್ಜಾರ್ ಇಂಡಿಯನ್ ಹ್ಯಾಕರ್' ಎನ್ನುವ ಯೂಟ್ಯೂಬ್‌ ಚಾನೆಲ್‌ಗೆ 235,000 ಚಂದಾದಾರರಿದ್ದಾರೆ.

ಇವರು ಈಚೆಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ರೈಲ್ವೇ ಹಳಿಗಳ ಮೇಲೆ ಕಲ್ಲುಗಳು, ಸೈಕಲ್‌ ಮತ್ತು ಗ್ಯಾಸ್‌ ಸಿಲಿಂಡರ್‌ಗಳನ್ನು ಇರಿಸುವ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ಸಿಲುಕಿಸುವಂತಹ ಅಪಾಯಕಾರಿ ಚಟುವಟಿಕೆಗಳನ್ನು ಒಳಗೊಂಡ ವೀಡಿಯೊಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿದ್ದರು.

ರೈಲ್ವೇ ಹಳಿಗಳ ಮೇಲಿನ ಚಟುವಟಿಕೆಗಳ ಬಗ್ಗೆ ದೂರು ಬಂದ ಹಿನ್ನೆಲೆ  ಉತ್ತರ ಪ್ರದೇಶದ ಖಂಡ್ರೌಲಿಯಲ್ಲಿರುವ ಅವರ ಮನೆಯಿಂದ ಶೇಖ್ ಅವರನ್ನು ಬಂಧಿಸಲಾಯಿತು. ಈ ಬಂಧನವನ್ನು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಅವರು ದೃಢಪಡಿಸಿದ್ದಾರೆ, ಅವರು X (ಹಿಂದಿನ ಟ್ವಿಟರ್) ನಲ್ಲಿನ ಪೋಸ್ಟ್‌ನಲ್ಲಿ ಶೇಖ್‌ರನ್ನು "ರೈಲ್ ಜಿಹಾದಿ" ಎಂದು ಉಲ್ಲೇಖಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ