ಮನೆಗೆ ನುಗ್ಗಿ ಬಾಲಕಿಯ ಮೇಲೆ ಅತ್ಯಾಚಾರ

ಶನಿವಾರ, 11 ನವೆಂಬರ್ 2023 (00:32 IST)
ಮುಂಬೈನಲ್ಲಿ16 ವರ್ಷದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಮಾಡಿದ  ಘಟನೆ ವರದಿಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿ ಅತ್ಯಾಚಾರ ಮಾಡಲಾಗಿದೆಯೆಂದು ಮುಂಬೈನ ನಗರ ಠಾಣೆಗೆ ಬಾಲಕಿಯ ಕುಟುಂಬ ದೂರು ನೀಡಿದೆ. 
 
ಪಿಎಸ್‌ಕೆ ನಾಯ್ಡು ಕಾಲೋನಿಯಲ್ಲಿ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ 21 ವರ್ಷ ವಯಸ್ಸಿನ ಗಿರೀಶ್ ಎಂಬವ ಅತ್ಯಾಚಾರ ಮಾಡಿದ್ದಾನೆಂದು ಬಾಲಕಿಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
 
ಮುಂಬೈನಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರದ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು,  ನಾಲ್ವರು ಶಾಲಾ ಬಾಲಕಿಯರ ಮೇಲೆ ರೇಪ್ ಪ್ರಕರಣಗಳ ವಿರುದ್ಧ ಬಾಲಕಿಯರ ಪೋಷಕರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದರು.
 
ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಬೆನ್ನ ಹಿಂದೆಯೇ ಮತ್ತೊಂದು ಅತ್ಯಾಚಾರ ನಡೆದಿರುವುದು ಮುಂಬೈಗರು ತತ್ತರಿಸುವಂತೆ ಮಾಡಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ