ಫಡ್ನವೀಸ್‍‍ ಅವರಿದ್ದ ಹೆಲಿಕಾಪ್ಟರ್ ಬಲವಂತದಿಂದ ಭೂ ಸ್ಪರ್ಶ

ಶನಿವಾರ, 9 ಡಿಸೆಂಬರ್ 2017 (19:59 IST)
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರಿದ್ದ ಹೆಲಿಕಾಪ್ಟರ್‌ ಬಲವಂತದಿಂದ ಭೂ ಸ್ಪರ್ಶ ಮಾಡಿದ ಘಟನೆ ನಡೆದಿದೆ.
 
ನಾಶಿಕ್‌ನಿಂದ ಔರಂಗಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ತೆರಳುವಾಗ ಈ ಘಟನೆ ನಡೆದಿದ್ದು, ಭೂಮಿ ಮೇಲಿಂದ ಟೇಕ್‌ ಆಫ್ ಆಗಿ ಕೇವಲ 50 ಅಡಿ ಎತ್ತರ ಏರಿದಾಗ ಅದಕ್ಕೆ ಮುಂದೆ ಹಾರಲು ಸಾಧ್ಯವಾಗಲಿಲ್ಲ. ಆದರೆ ಪೈಲಟ್‌ ಕೆಲವೇ ಮೀಟರ್‌ಗಳ ಅಂತರದಲ್ಲಿ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಇಳಿಸಿದರು ಎನ್ನಲಾಗಿದೆ.
 
ಫ‌ಡ್ನವೀಸ್‌ ಅವರು ಜಲ ಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಮತ್ತು ಇತರರೊಂದಿಗೆ ಹೆಲಿಕಾಪ್ಟರ್‌ ಹೊರಡುತ್ತಿದ್ದರು. ಓವರ್‌ಲೋಡ್‌ ಆಗಿದ್ದರಿಂದಲೇ ಅದಕ್ಕೆ ಹಾರಲು ಸಾಧ್ಯವಾಗಲಿಲ್ಲ. ಆಗ ಹೆಲಿಕಾಪ್ಟರ್‌ನಲ್ಲಿದ್ದ  ಫ‌ಡ್ನವೀಸ್‌ ಅವರ ಅಡುಗೆಯಾಳನ್ನು ಮತ್ತು ಆತನ ಚೀಲವನ್ನು ಕೆಳಗಿಳಿದ ನಂತರ ಹೆಲಿಕಾಪ್ಟರ್‍‍ನಲ್ಲಿ ಪ್ರಯಾಣ ಬೆಳೆಸಲಾಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ