ನಿಮಿಷಾ ಪ್ರಿಯಾಗೆ ಕ್ಷಮೆಯೇ ಇಲ್ಲ, ಪರಿಹಾರ ಹಣವೂ ಬೇಡ ಎಂದ ಯೆಮನ್ ಕುಟುಂಬ

Krishnaveni K

ಗುರುವಾರ, 17 ಜುಲೈ 2025 (11:30 IST)
ಯೆಮನ್: ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಮಾಡಿದ ತಪ್ಪಿಗೆ ಕ್ಷಮೆಯಿಲ್ಲ, ಆಕೆಯ ಕಡೆಯಿಂದ ಪರಿಹಾರ ಮೊತ್ತವೂ ನಮಗೆ ಬೇಡ ಎಂದು ಸಂತ್ರಸ್ತ ಕುಟುಂಬ ಖಡಾಖಂಡಿತವಾಗಿ ಹೇಳಿದೆ.

ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಯೆಮನ್ ನಲ್ಲಿ ಅಲ್ಲಿನ ಪ್ರಜೆ ಮೆಹ್ದಿ ಎಂಬಾತನನ್ನು ಕೊಲೆಗೈದ ತಪ್ಪಿಗೆ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾಳೆ. ನಿನ್ನೆಯೇ ಆಕೆ ನೇಣುಗಂಬಕ್ಕೇರಬೇಕಾಗಿತ್ತು. ಆದರೆ ಸೂಫಿ ಸಂತರ ಮಧ್ಯಸ್ಥಿಕೆಯಲ್ಲಿ ಯೆಮನ್ ಸರ್ಕಾರದ ಜೊತೆ ಮಾತುಕತೆ ನಡೆದ ಪರಿಣಾಮ ಇದು ಮುಂದೂಡಿಕೆಯಾಯಿತು.

ಈ ನಡುವೆ ಮೆಹ್ದಿ ಕುಟುಂಬದ ಜೊತೆ ಪರಿಹಾರ ಹಣ ನೀಡಿ ಗಲ್ಲು ಶಿಕ್ಷೆಯಿಂದ ವಿನಾಯ್ತಿ ನೀಡಲು ಮನವೊಲಿಸುವ ಕೆಲಸ ನಡೆಯುತ್ತಲೇ ಇದೆ. ಆದರೆ ಮೆಹ್ದಿ ಕುಟುಂಬ ಯಾವ ಕಾರಣಕ್ಕೂ ನಾವು ಪರಿಹಾರ ಮೊತ್ತ ತೆಗೆದುಕೊಳ್ಳಲ್ಲ. ಆಕೆಗೆ ಮರಣದಂಡನೆಯೇ ಆಗಬೇಕು ಎಂದು ಪಟ್ಟು ಹಿಡಿದು ಕುಳತಿದೆ.

ಆಕೆಯನ್ನು ಸಂತ್ರಸ್ತೆಯಂತೆ ಬಿಂಬಿಸುವುದನ್ನು ಮೊದಲು ಬಿಡಬೇಕು. ಆಕೆ ಕೊಲೆ ಅಪರಾಧಿ. ಆಕೆ ಮಾಡಿದ ತಪ್ಪಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ ಎಂದು ಮೆಹ್ದಿ ಕುಟುಂಬ ಖಚಿತವಾಗಿ ಹೇಳಿದೆ. ಹೀಗಾಗಿ ಈಗ ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆಯೇ ಗತಿಯೆನಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ