ಭಾರತ್ ಜೋಡೋ ಎಂಟ್ರಿಗೂ ಮುನ್ನ ಕಾಂಗ್ರೆಸ್ಗೆ ತೀವ್ರ ಹಿನ್ನಡೆ

ಬುಧವಾರ, 18 ಜನವರಿ 2023 (14:40 IST)
ಶ್ರೀನಗರ : ಜಮ್ಮು-ಕಾಶ್ಮೀರಕ್ಕೆ ಭಾರತ್ ಜೋಡೋ ಯಾತ್ರೆ ತಲುಪುವ ಒಂದು ದಿನದ ಮೊದಲು ಕಾಂಗ್ರೆಸ್ಗೆ ತೀವ್ರ ಹಿನ್ನಡೆಯಾಗಿದೆ. ಸಂಸದ ರಾಹುಲ್ ಗಾಂಧಿ ನಡೆ ಖಂಡಿಸಿರುವ ರಾಜ್ಯ ವಕ್ತಾರೆ ದೀಪಿಕಾ ಪುಷ್ಕರ್ ನಾಥ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರ ಬಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥುವಾ ಅತ್ಯಾಚಾರ ಆರೋಪಿಯನ್ನು ಬೆಂಬಲಿಸಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಚೌಧರಿ ಲಾಲ್ ಸಿಂಗ್ ಅವರನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸೇರಿಸಿಕೊಂಡಿರುವುದು,

ಪಕ್ಷ ಸೇರ್ಪಡೆ ಪ್ರಸ್ತಾಪ ಗಮನಿಸಿದರೆ ರಾಜೀನಾಮೆ ಹೊರೆತು ಬೇರೆ ಆಯ್ಕೆ ಇಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ