ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ : ಖರ್ಗೆ
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆ ಹಿಮಾಚಲ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಹೋದಾಗ ಕೂಡ ಉತ್ತಮ ಸ್ಪಂದನೆ ಸಿಕ್ಕಿತ್ತು. ಹೀಗಾಗಿ ಉತ್ತಮ ಬಹುಮತದಿಂದ ಪಕ್ಷಕ್ಕೆ ಗೆಲುವು ಬಂದಿದೆ ಎಂದು ಅಭಿಪ್ರಾಯಪಟ್ಟರು.
ಆ ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಪಟ್ಟಿ ಕೊಟ್ಟಿದ್ದೆವು. ಅದಕ್ಕೆ ನಮಗೆ ಅಲ್ಲಿನ ಜನ ಒಗ್ಗೂಡಿಸಿ ಗೆಲ್ಲಿಸಿದ್ದಾರೆ. ಇದರಲ್ಲಿ ಹೆಚ್ಚಿನ ಪಾತ್ರ ಪ್ರಿಯಾಂಕಾ ವಾದ್ರಾದ್ದು ಇದೆ. ಸಾಕಷ್ಟು ರ್ಯಾಲಿ, ಸಮಾವೇಶ ಮಾಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.