ಸಲಿಂಗ ಕಾಯ್ದೆ ವಿರೋಧಿಸಿ ಟಾಪ್‌ಲೆಸ್ ಕಾರ್ಯಕರ್ತೆಯರ ಪ್ರತಿಭಟನೆ

ಗುರುವಾರ, 30 ನವೆಂಬರ್ 2023 (23:33 IST)
ಕುಪ್ಪಸ ಧರಿಸಿರದ ಇಬ್ಬರು ಟಾಪ್‌ಲೆಸ್ ಕಾರ್ಯಕರ್ತೆಯರು ಸ್ಟಾಕ್‌ಹಾಮ್ ರಷ್ಯಾ ರಾಯಭಾರ ಕಚೇರಿಯ ಬೇಲಿಯನ್ನು ಏರಿ ದೇಶದ ಸಲಿಂಗ ವಿರೋಧಿ ಮಸೂದೆಯನ್ನು ಮತ್ತು ಸಲಿಂಗಕಾಮಿಗಳ ದೂಷಣೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಕರ್ತೆಯರನ್ನು ತೆರವು ಮಾಡಲು ರಾಯಭಾರ ಕಚೇರಿಗೆ ಪೊಲೀಸರನ್ನು ಕರೆಸಲಾಯಿತು.
 
ಉಕ್ರೇನಿನ ಮಹಿಳಾ ಗುಂಪು ಫೆಮೆನ್‌ಗೆ ಸೇರಿದ ಇಬ್ಬರು ಮಹಿಳೆಯರು ರಾಯಭಾರ ಕಚೇರಿ ಮೈದಾನದಲ್ಲಿ ರೈನ್‌ಬೋ ಧ್ವಜವನ್ನು ಬೀಸುತ್ತಾ 'ರಷ್ಯಾದಲ್ಲಿ ಸಲಿಂಗಿಗಳ ಪ್ರಚಾರ' ಎಂಬ ಚಿಹ್ನೆಯನ್ನು ಪ್ರದರ್ಶಿಸಿದರು. ರಾಯಭಾರ ಕಚೇರಿಯ ಹೊರಗೆ ಅವರಿಗೆ ಇನ್ನೂ ಇಬ್ಬರು ಕಾರ್ಯಕರ್ತರು ಬೆಂಬಲಿಸಿದ್ದು, 'ಸಲಿಂಗಿಗಳ ಹಕ್ಕು ಮಾನವ ಹಕ್ಕುಗಳು' ಎಂದು ಘೋಷಣೆ ಕೂಗಿದರು.
 
ಇತ್ತೀಚೆಗೆ ಜಾರಿಗೆ ತಂದ ರಷ್ಯಾ ಕಾನೂನಿನ ವಿರುದ್ಧ ಗುಂಪು ಪ್ರತಿಭಟನೆ ನಡೆಸುತ್ತಿದೆ ಎಂದು ಕಾರ್ಯಕರ್ತೆ ಜೆನ್ನಿ ವೆನ್‌ಹ್ಯಾಮರ್ ತಿಳಿಸಿದ್ದಾರೆ. ರಷ್ಯಾ ಕಾನೂನಿನಲ್ಲಿ ಸಲಿಂಗಿಗಳು ರ್ಯಾಲಿಯನ್ನು ನಡೆಸಿದರೆ ಮತ್ತು ಅಪ್ರಾಪ್ತ ವಯಸ್ಕರಿಗೆ ಸಲಿಂಗಿ ಸಮುದಾಯದ ಬಗ್ಗೆ ಮಾಹಿತಿ ನೀಡಿದರೆ ಭಾರಿ ದಂಡವನ್ನು ವಿಧಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ