ಬೆಂಗಳೂರು: ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಬುಕ್ ಮಾಡಿದ್ದ ಐಸ್‌ಕ್ರೀಂನಲ್ಲಿ ಪತ್ತೆಯಾದ ಬೆರಳಿನ ಬಗ್ಗೆ ಶೋಧ ನಡೆಸಿದ ಪೊಲೀಸರು, ಕೊನೆಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ ಕೆಲ ದಿನಗಳ ಹಿಂದೆ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಕೋನ್ ಐಸ್‌ಕ್ರೀಂ ಬುಕ್ ಮಾಡಿದ್ದರು. ಅದನ್ನು ತಿನ್ನಲು ಬಾಕ್ಸ್ ತೆರೆದಾಗ ಐಸ್ ಕ್ರೀಂನಲ್ಲಿ ಮಾನವನ ಬೆರಳಿರುವುದು ಪತ್ತೆಯಾಗಿತ್ತು. ಅದಲ್ಲದೆ ಈ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಐಸ್‌ಕ್ರೀಂನಲ್ಲಿ ಪತ್ತೆಯಾದ ಬೆರಳು ಆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯದ್ದು ತಿಳಿದುಬಂದಿದೆ. ಪುಣೆಯಲ್ಲಿರುವ ಐಸ್‌ಕ್ರೀಂ ಫ್ಯಾಕ್ಟರಿಗೆ ಹೋಗಿ ವಿಚಾರಣೆ ನಡೆಸಿದಾಗ ಕೆಲ ದಿನಗಳ ಹಿಂದೆ ಇಲ್ಲಿ ಕೆಲಸ ಮಾಡುವ ವ್ಯಕ್ತಿ ಕೈಬೆರಳು ಕತ್ತರಿಸಿದ್ದ ವಿಚಾರ ಬೆಳಕಿಗೆ ಬಂದಿದೆ.