ಮೊಬೈಲ್ ಮೂಲಕ ಪತ್ನಿಗೆ ತಲಾಖ್ ನೀಡಿದ ಶಿಕ್ಷಕ. ಕಾರಣವೇನು ಗೊತ್ತಾ?

ಶನಿವಾರ, 22 ಡಿಸೆಂಬರ್ 2018 (06:38 IST)
ಹೈದರಾಬಾದ್ : ಕಾನೂನು ನಿಯಮವನ್ನು ಪಾಲಿಸುವಂತೆ ಮಕ್ಕಳಿಗೆ ಹೇಳಬೇಕಾದ ಪ್ರಿನ್ಸಿಪಾಲ್ ಯೊಬ್ಬ ಕಾನೂನು ನಿಯಮ ಉಲ್ಲಂಘಿಸಿ ಪತ್ನಿಗೆ ತಲಾಖ್ ನೀಡಿರುವ ಘಟನೆ ಹೈದರಾಬಾದ್ ನ ತೊಲಿಚೌಕಿ ಪ್ರದೆಶದಲ್ಲಿ ನಡೆದಿದೆ. 


ಮುಸ್ಲಿಂ ಸಮುದಾಯದ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಟಿಸಿದೆ. ಆದರೆ ಶಾಲೆವೊಂದರಲ್ಲಿ ಪ್ರಿನ್ಸಿಪಾಲ್ ಆಗಿರುವ ಷರೀಫ್ ಎಂಬಾತ ತನ್ನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಕಾರಣಕ್ಕೆ  ಮೊಬೈಲ್ ಮೂಲಕ ಪತ್ನಿಗೆ ತಲಾಖ್ ನೀಡಿದ್ದಾನೆ.


ಗಂಡು-ಹೆಣ್ಣು ಮಕ್ಕಳ ನಡುವೆ ತಾರತಮ್ಯ ಮಾಡಬಾರದು ಎಂದು ಬುದ್ಧಿ ಹೇಳಬೇಕಾದ ಶಿಕ್ಷಕ ಪತಿಯ ಈ ವರ್ತನೆಯಿಂದ ಬೇಸರಗೊಂಡ  ಪತ್ನಿ, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ