ವಿದ್ಯಾರ್ಥಿನಿಯನ್ನು ಕೊಲೆ ಮಾಡಲು ಯತ್ನಿಸಿದ ಶಿಕ್ಷಕ ಕಾರಣವೇನು ಗೊತ್ತಾ?
ಭಾನುವಾರ, 4 ನವೆಂಬರ್ 2018 (12:54 IST)
ಹೈದರಾಬಾದ್ : ವಿದ್ಯಾರ್ಥಿನಿ ತನ್ನನ್ನು ತಿರಸ್ಕರಿಸಿದ್ದಕ್ಕೆ ಹಿಂದಿ ಶಿಕ್ಷಕನೊಬ್ಬ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಕರ್ನೂಲ್ ಜಿಲ್ಲೆಯ ಬಂಗರುಪೇಟಾ ಪ್ರದೇಶದಲ್ಲಿರುವ ರಾಕ್ವೆಲ್ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಶಂಕರ್ ವಿದ್ಯಾರ್ಥಿನಿ ತನ್ನನ್ನು ತಿರಸ್ಕರಿಸಿದ್ದಾಳೆ ಎಂದು ಕೋಪಗೊಂಡು ಆಕೆಯ ಮನೆಗೆ ನುಗ್ಗಿ ಹಲ್ಲೆ ಮಾಡಿ ಬ್ಲೇಡ್‍ನಿಂದ ಅವಳ ಗಂಟಲನ್ನು ಕತ್ತರಿಸಲು ಪ್ರಯತ್ನಿಸಿದ್ದಾನೆ.
ಆ ವೇಳೆ ವಿದ್ಯಾರ್ಥಿನಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಬಂದು ಕಾಮುಕ ಶಿಕ್ಷಕನನ್ನು ಹಿಡಿದು ಮರಕ್ಕೆ ಕಟ್ಟಿ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ವಿದ್ಯಾರ್ಥಿಯನ್ನು ಹಾಗೂ ಸ್ಥಳೀಯರ ಥಳಿತದಿಂದ ಗಾಯಗೊಂಡಿದ್ದ ಆರೋಪಿ ಶಂಕರ್ ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಳಿಕ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಗಾಂತ ಶ್ರೀನಿವಾಸರಾವ್ ಶಂಕರ್ ನನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ