ಭಾರತದಲ್ಲಿ ಸಿರಿಂಜ್ ಕೊರತೆ..?

ಭಾನುವಾರ, 12 ಡಿಸೆಂಬರ್ 2021 (08:09 IST)
ದೆಹಲಿ ಹಾಗೂ ಎನ್ ಸಿಆರ್ ಪ್ರದೇಶಗಳಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಭಾರತದ ಅತಿದೊಡ್ಡ ಸಿರಿಂಜ್ ತಯಾರಕ ಕಂಪನಿಯಾದ ಹಿಂದೂಸ್ತಾನ್ ಸಿರಿಂಜ್ಸ್ ಮತ್ತು ಮೆಡಿಕಲ್ ಡಿವೈಸಸ್ಗೆ ಉತ್ಪಾದನೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಾಗಿತ್ತು.

ಅದರಂತೆ ಹಿಂದೂಸ್ತಾನ್ ಸಿರಿಂಜ್ ಕಂಪನಿ ತನ್ನ ಉತ್ಪಾದನೆಯನ್ನು ನಿಲ್ಲಿಸಿದ್ದು ದೇಶದಲ್ಲಿ ಸಿರಿಂಜ್ ಗಳ ಕೊರತೆ ಉಂಟಾಗುವ ಸಾಧ್ಯತೆ ಇದೆ. ಇಡೀ ಭಾರತಕ್ಕೆ ಅವಶ್ಯವಿರುವ ಒಟ್ಟು ಮೂರನೇ ಎರಡರಷ್ಟು ಸಿರಿಂಜ್ಗಳನ್ನು ಹಿಂದೂಸ್ತಾನ್ ಸಿರಿಂಜ್ ಕಂಪನಿ ಉತ್ಪಾದನೆ ಮಾಡುತ್ತಿತ್ತು.

ಈಗ ಹಿಂದೂಸ್ತಾನ್ ಸಿರಿಂಜ್ ಫರಿದಾಬಾದ್ನಲ್ಲಿರುವ ತನ್ನ 11-ಎಕರೆ ಪ್ರದೇಶದ ತನ್ನ ಉತ್ಪಾದನಾ 4 ಘಟಕಗಳಲ್ಲಿ 3 ಅನ್ನು ಮುಚ್ಚಿದೆ.ಹೀಗಾಗಿ ಇನ್ನು ಮಂದೆ ಭಾರತದಲ್ಲಿ ಸಿರಿಂಜ್ ಮತ್ತು ಸೂಜಿಗಳ ಸಮಸ್ಯೆ ಎದುರಾಗುವ ಆತಂಕ ಉಂಟಾಗಿದೆ. ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ