ಎಲ್ಲರನ್ನೂ ಒಳಗೊಳ್ಳುವ ಮುನ್ನೋಟವುಳ್ಳ ಬಜೆಟ್‌ - ಪ್ರಧಾನಿ ಮೋದಿ

geetha

ಶುಕ್ರವಾರ, 2 ಫೆಬ್ರವರಿ 2024 (18:04 IST)
ನವದೆಹಲಿ :ಬಜೆಟ್‌ ನಾಲ್ಕು ರೀತಿಯಲ್ಲಿ ಯುವಜನತೆ, ಮಹಿಳೆಯರು, ರೈತರು ಮತ್ತು ಬಡವರ ಸರ್ವತೋಮುಖ  ಅಭಿವೃದ್ಧಿಯ ಬಗ್ಗೆ ಯೋಜನೆಗಳನ್ನು ಹೊಂದಿದೆ ಎಂದು ನುಡಿದ ಪ್ರಧಾನಿ ಮೋದಿ, ಇದು ಭವಿಷ್ಯವನ್ನು ನಿರ್ಮಿಸುವ ಬಜೆಟ್‌ ಆಗಿದೆ ಎಂದು ನುಡಿದರು. ಈ ಬಜೆಟ್‌ ನಲ್ಲಿ 2047 ರ ವಿಕಸಿತ ಭಾರತದ ದೂರದೃಷ್ಟಿಯನ್ನು ಹೊಂದಲಾಗಿದ್ದು, ಇಂಥದ್ದೊಂದು ಬಜೆಟ್‌ ನೀಡಿದ್ದಕ್ಕೆ ನಿರ್ಮಲಾ ಸೀತಾರಾಮನ್‌ ಮತ್ತವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಬಜೆಟ್‌ ನಲ್ಲಿ ಯುವ ಭಾರತ ಯುವಆಕಾಂಕ್ಷೆಗಳ ಪ್ರತಿಬಿಂಬವಿದೆ. ಈ ಬಜೆಟ್‌ ನಲ್ಲಿ ಎರಡು ಮಹತ್ವ ಪೂರ್ಣ ನಿರ್ಣಯ ಕೈಗೊಳ್ಳಲಾಗಿದ್ದು,ವಿತ್ತೀಯ  ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡೇ 11.11 ಲಕ್ಷ ಕೋಟಿಯ ಐತಿಹಾಸಿಕ ಗುರಿ ಸಾಧಿಸಲಾಗಿದೆ ಎಂದು ಹೇಳಿದ್ದಾರೆ. 

ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಮಧ್ಯಂತರ ಬಜೆಟ್‌ 2024 ಎಲ್ಲರನ್ನೂ ಒಳಗೊಳ್ಳುವ ಮತ್ತು ಅಭಿವೃದ್ಧಿಯ ಮುನ್ನೋಟವುಳ್ಳ ಬಜೆಟ್‌ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಜೆಟ್‌ ಮಂಡನೆಯ ಬಳಿಕ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ಬಜೆಟ್‌ ಅಭಿವೃದ್ಧಿಯ ಬಗ್ಗೆ ಆತ್ಮವಿಶ್ವಾಸವನ್ನು ಹೊಂದಿದೆ ಎಂದರು. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ