ಅಕ್ರಮ ಸಂಬಂಧ ಬಿಡು ಎಂದವನ ಮೇಲೆ ಕೇಸ್ ಹಾಕಿದ ಮಹಿಳೆ

ಗುರುವಾರ, 15 ಅಕ್ಟೋಬರ್ 2020 (11:34 IST)
ಮಹಿಳೆಯೊಬ್ಬಳು ಅನೈತಿಕ ಸಂಬಂಧ ಹೊಂದಿರುವ ವಿಷಯ ವ್ಯಕ್ತಿಯೊಬ್ಬನಿಗೆ ಗೊತ್ತಾಗಿದ್ದು, ಅದನ್ನು ಬಿಡುವಂತೆ ಸಲಹೆ ಕೊಟ್ಟಿದ್ದಾನೆ.

ಆದರೆ ಮಹಿಳೆಯು ತನ್ನ ಬಂಡವಾಳ ಬಯಲಿಗೆ ಬರುತ್ತೆ ಎನ್ನೋ ಹೆದರಿಕೆಯಲ್ಲಿ ಸಲಹೆ ನೀಡಿದ ವ್ಯಕ್ತಿಯ ವಿರುದ್ಧ ಮಾನಭಂಗ ಕೇಸ್ ದಾಖಲು ಮಾಡಿದ್ದಳು.

ಮುಂಬೈನಲ್ಲಿ ಘಟನೆ ನಡೆದಿದ್ದು, ತನ್ನ ಮಕ್ಕಳಿಬ್ಬರ ಮೇಲೆ 50 ವರ್ಷದ ವ್ಯಕ್ತಿ ಮಾನಭಂಗ ಮಾಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಳು. ಪೊಲೀಸರು ಕೇಸ್ ದಾಖಲಿಸಿಕೊಂಡು ವ್ಯಕ್ತಿಯನ್ನು ಜೈಲಿಗಟ್ಟಿದ್ದರು.

ಆದರೆ ವಿಚಾರಣೆ ವೇಳೆ ಮಹಿಳೆಯ ನಿಜ ಬಣ್ಣ ಬಯಲಾಗಿದ್ದು, ವ್ಯಕ್ತಿಯನ್ನು ಆರೋಪದಿಂದ ಮುಕ್ತಗೊಳಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ