ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅಜ್ಜ ಮತ್ತು ಅತ್ತಿಗೆಯನ್ನು ಕೊಂದ ಮಹಿಳೆ

ಶನಿವಾರ, 19 ಡಿಸೆಂಬರ್ 2020 (06:35 IST)
ಹರಿದ್ವಾರ :  ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರೇಮಿಯ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿಯ ಅಜ್ಜ ಮತ್ತು ಸಹೋದರಿಯನ್ನು ತನ್ನ ಪ್ರೇಮಿಯ ಜೊತೆ ಸೇರಿ  ಕೊಲೆ ಮಾಡಿದ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.

ಮಹಿಳೆಯ ಪತಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಮಹಿಳೆ ತನ್ನ ಪ್ರೇಮಿಯ ಜೊತೆ ಸರಸವಾಡುತ್ತಿದ್ದಳು. ಒಮ್ಮೆ ತನ್ನ ಪ್ರೇಮಿ ತನ್ನ ರೂಮಿಗೆ ಬರುತ್ತಿರುವುದನ್ನು ಪತಿಯ ಅಜ್ಜ ನೋಡಿದ ಕಾರಣ ಪತಿಗೆ ವಿಚಾರ ತಿಳಿಸುತ್ತಾರೆ ಎಂದು ಭಯದಿಂದ ಪ್ರೇಮಿಯ ಜೊತೆ ಸೇರಿ ಅಜ್ಜನನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಇದನ್ನು ನೋಡಿದ ಪತಿಯ ಸಹೋದರಿಯನ್ನು ಕೂಡ ಕೊಂದಿದ್ದಾಳೆ.

ಈ ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗ ಆರೋಪಿಗಳಿಬ್ಬರು ಸಿಕ್ಕಿಹಾಕಿಕೊಂಡಿದ್ದು ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ