ಕುಡಿಯಲು ನೀರು ಕೇಳಿ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನಿಗೆ ತಕ್ಕ ಶಾಸ್ತಿಗೈದ ಮಹಿಳೆ

ಗುರುವಾರ, 7 ಡಿಸೆಂಬರ್ 2023 (11:25 IST)
ಕುಡಿಯಲು ನೀರು ಕೇಳಿಕೊಂಡು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ ಘಟನೆ ದೆಹಲಿಯಲ್ಲಿ ಡೆದಿದೆ. ಆದರೆ ದಿಟ್ಟತನ ಮೆರೆದಿರುವ ಮಹಿಳೆ ಆರೋಪಿಯನ್ನು ಓಡಿಸುವಲ್ಲಿ ಯಶ ಕಂಡಿದ್ದಾರೆ.
 
 ಆರತಿ ಎಂಬುವವರು ತಮ್ಮ ಮನೆಯಲ್ಲೇ ಒಬ್ಬರೇ ಇದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಾಗಿಲು ಬಡಿದಿದ್ದಾನೆ. ಆಕೆಯ ಪತಿ ಸೋಮಶೇಖರ್ ಕೆಲಸಕ್ಕೆ ಹೋಗಿದ್ದು ಮನೆಗೆ ಹಿಂತಿರುಗಿರಲಿಲ್ಲ. ಅಪಾಯದ ವಾಸನೆ ಇಲ್ಲದ ಅವರು ಸಹಜವಾಗಿ ಬಾಗಿಲು ತೆರೆದಿದ್ದಾರೆ. ಹೊರಗೆ ನಿಂತಿದ್ದ ಅಪರಿಚಿತ ವ್ಯಕ್ತಿ ಕುಡಿಯಲು ನೀರು ಕೊಡುವಂತೆ ಕೇಳಿಕೊಂಡಿದ್ದಾರೆ.
 
ನೀರು ತರಲು ಅಡುಗೆ ಮನೆಗೆ ಹೋದಾಗ ಆರತಿಯನ್ನು ಹಿಂಬಾಲಿಸಿದ ಆತ ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಮುಂದಾಗಿದ್ದಾನೆ.  ಆದರೆ ಧೃತಿಗೆಡದ ಆರತಿ, ಅಲ್ಲೇ ಇದ್ದ ದೊಣ್ಣೆಯಿಂದ ಮನಬಂದಂತೆ ಆತನನ್ನು ಥಳಿಸಿದ್ದಾರೆ ಮತ್ತು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
 
ಆಕೆಯ ಕೂಗನ್ನು ಕೇಳಿ ಅಕ್ಕಪಕ್ಕದ ಮನೆಯವರು ಅಲ್ಲಿಗೆ ಬರುವ ವೇಳೆಗೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ