ಕಿಸ್ಸಿಂಗ್ ಬಾಬಾ ಎಂದೇ ಜನಪ್ರಿಯಗೊಂಡಿರುವ ಈ ನಕಲಿ ಬಾಬಾನ ಬಳಿ ಆನಾರೋಗ್ಯ ಪೀಡಿತ, ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಜನರು ಬರುತ್ತಿದ್ದರು. ಆಗ ಈ ಬಾಬಾ ಅವರನ್ನು ಆಲಂಗಿಸಿ, ಚುಂಬಿಸುತ್ತಿದ್ದ. ಈ ರೀತಿ ಮಾಡುವುದರಿಂದ ನಿಮ್ಮ ಕಷ್ಟಗಳನ್ನೆಲ್ಲಾ ನಾನು ಪರಿಹರಿಸುತ್ತೇನೆ ಎಂದು ನಂಬಿಸುತ್ತಿದ್ದ.
ನಿಮ್ಮ ಸಮಸ್ಯೆ, ಆರ್ಥಿಕ ಸಂಕಷ್ಟಗಳನ್ನೆಲ್ಲಾ ಪರಿಹರಿಸುತ್ತೇನೆ' ಎಂದು ತನ್ನ ಬಳಿ ಬರುವ ಭಕ್ತರನ್ನು ಆಲಂಗಿಸಿ, ಚುಂಬಿಸುತ್ತಿದ್ದ ನಕಲಿ ಬಾಬಾನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ನಕಲಿ ಬಾಬಾನನ್ನು ಪೊಲೀಸರು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕೋರ್ಟ್ ನಕಲಿ ಬಾಬಾನಿಗೆ ಜನವರಿ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅಲ್ಲದೇ ಬಾಬಾನನ್ನು ನಗರದ ಮಾನಸಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಿದೆ.