ಕಾಲೇಜು ವಿದ್ಯಾರ್ಥಿನಿಯ ಮೇಲೆ ನಕಲಿ ಪೊಲೀಸಪ್ಪನಿಂದ ರೇಪ್

ಗುರುವಾರ, 7 ಡಿಸೆಂಬರ್ 2023 (12:07 IST)
ಯುವತಿ ನೀಡಿರುವ ದೂರಿನ ಪ್ರಕಾರ  ಆಕೆ ತನ್ನ ಸ್ನೇಹಿತನ ಜತೆ  ಬೈಕ್ ಮೇಲೆ ಪ್ರಯಾಣಿಸುತ್ತಿದ್ದಳು. ಅವರಿಬ್ಬರನ್ನು  ಚೆಕ್ ಪೋಸ್ಟ್ ಬಳಿ ತಡೆದ ಪೊಲೀಸ್ ವೇಷಧಾರಿ ವ್ಯಕ್ತಿಯೊಬ್ಬ ತನಿಖೆಯ ನೆಪ ಹೇಳಿ ಯುವತಿಯನ್ನು ಬೈಕ್ ಮೇಲೆ ಕೊಂಡೊಯ್ದಿದ್ದಾನೆ.  ನಂತರ ಅಜ್ಞಾತ ಸ್ಥಳಕ್ಕೆ ಕೊಂಡೊಯ್ದು ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿದೆ.
 
ಪೊಲೀಸ್ ವೇಷಧಾರಿಯಾದ ವ್ಯಕ್ತಿಯೊಬ್ಬ  ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿದ ಘಟನೆ  ಚೆನ್ನೈನಲ್ಲಿ ನಡೆದಿದೆ. 
 
ಮತ್ತೆ ಚೆಕ್ ಪೋಸ್ಟ್ ಬಳಿ ಹಿಂತಿರುಗಿದ ಆರೋಪಿ ಪೊಲೀಸ್ ಠಾಣೆಯಿಂದ ಯುವತಿಯನ್ನು ಕರೆದೊಯ್ಯುವಂತೆ ಪೀಡಿತಳ ಸ್ನೇಹಿತನ ಬಳಿ ಹೇಳಿದ್ದಾನೆ. ಆದರೆ ಅಲ್ಲಿಗೆ ಹೋದ  ಯುವಕನಿಗೆ ಆಕೆ ಕಂಡು ಬಂದಿಲ್ಲ. 
 
ಈ ಎಲ್ಲ ದೃಶ್ಯಾವಳಿಗಳು  ಚೆಕ್ ಪೋಸ್ಟ್‌ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ