ಐವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಂಧನ

ಶುಕ್ರವಾರ, 8 ಡಿಸೆಂಬರ್ 2023 (12:07 IST)
ವಸತಿಗೃಹದ ಮೇಲ್ವಿಚಾರಕ 51 ವರ್ಷ ವಯಸ್ಸಿನ ಫಿಲಿಪ್ ಜಾರ್ಜ್, ವಿದ್ಯಾರ್ಥಿನಿಯರನ್ನು ವಸತಿಗೃಹದ ಹತ್ತಿರವಿರುವ ತನ್ನ ಮನೆಗೆ ಕರೆದುಕೊಂಡು ಅತ್ಯಾಚಾರವೆಸಗುತ್ತಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
 
ಬಾಲಕಿಯರ ವಸತಿಗೃಹದಲ್ಲಿ ಕನಿಷ್ಠ ಐವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಎನ್‌ಜಿಒ ಅಧಿಕಾರಿಗಳನ್ನು ಬಂಧಿಸಲಾಗಿದೆ.
 
ರಾಜಧಾನಿ ಭುವನೇಶ್ವರ್‌ದಿಂದ 500 ಕಿ.ಮೀ ದೂರದಲ್ಲಿರುವ ಕೋರಾಪಟ್‌ ಜಿಲ್ಲೆಯ ಪೊಡಗಾಡಾ ಗ್ರಾಮದಲ್ಲಿರುವ ಸರಕಾರದ ಮಕ್ಕಳಾಭಿವೃದ್ಧಿ ಇಲಾಖೆಯುಂದ ನಡೆಸಲಾಗುತ್ತಿದ್ದ ವಿದ್ಯಾರ್ಥಿನಿಯರ ವಸತಿ ಗೃಹದಲ್ಲಿ 12 ರಿಂದ 15 ವಯಸ್ಸಿನ 18 ವಿದ್ಯಾರ್ಥಿನಿಯರಿದ್ದಾರೆ.
 
12 ವರ್ಷ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ವಸತಿ ಗೃಹದ ಮೇಲ್ವಿಚಾರಕ ಜಾರ್ಜ್ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
 
ವಸತಿ ಗೃಹದ ಇತರ ವಿದ್ಯಾರ್ಥಿನಿಯರು ಕೂಡಾ ತಮ್ಮ ಮೇಲೆ ಜಾರ್ಜ್ ನಿರಂತರ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ