ಮದುವೆಗೆ ನಿರಾಕರಿಸಿದ ವಿಧವೆಯ ಮೇಲೆ ಆಸಿಡ್ ದಾಳಿ

ಸೋಮವಾರ, 21 ಜನವರಿ 2019 (07:24 IST)
ತಮಿಳುನಾಡು : ಮದುವೆಯಾಗಲು ನಿರಾಕರಿಸಿದ ವಿಧವೆಯ ಮೇಲೆ ಯುವಕನೊಬ್ಬ ಆಸಿಡ್ ಎರಚಿ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ.


ಆರೋಪಿ ಹೆಸರು ಜಾನ್(28) ಎಂದು ಗುರುತಿಸಲಾಗಿದ್ದು, ಗಿರಿಜಾ (35) ಆಸಿಡ್ ದಾಳಿಗೆ ಒಳಗಾದ ವಿಧವಾ  ಮಹಿಳೆ. ಒಂಬತ್ತು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಈಕೆ ತನ್ನ ಇಬ್ಬರು ಮಕ್ಕಳೊಂದಿಗೆ ತಿರುವತ್ತರ್ ಬಳಿ ವಾಸಿಸುತ್ತಿದ್ದಳು. ಈಕೆಗೆ ನೆರೆಮನೆಯಲ್ಲಿ ವಾಸಿಸುತ್ತಿದ್ದ ಜಾನ್ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಗಿರಿಜಾ ಆತನ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದಳು. ಈ ಕಾರಣದಿಂದ ಕೋಪಗೊಂಡ ಆತ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ.


ತಕ್ಷಣ ನೆರೆಹೊರೆಯವರು ಆಕೆಯನ್ನು ಕನ್ಯಾಕುಮಾರಿಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಿದ್ದಾರೆ. ಈ ಘಟನೆಯ ನಡುವೆ ಜಾನ್ ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ತಿರುವತ್ತರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ