ಡಾ.ಶೆಟ್ಟಿ’ಸ್​ ಕಾಸ್ಮೆಟಿಕ್ ಸೆಂಟರ್‌ಗೆ ಬೀಗ

ಗುರುವಾರ, 19 ಮೇ 2022 (22:46 IST)
ಕಿರುತೆರೆ ನಟಿ ಚೇತನಾ ರಾಜ್ ಸಾವು ಪ್ರಕರಣ ಸಂಬಂಧ ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್‌ಗೆ ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಗೋಳೂರು ನೋಟಿಸ್ ನೀಡಿದ್ದು, ಒಂದು ದಿನದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಒಂದುವೇಳೆ ಉತ್ತರ ನೀಡದಿದ್ದರೆ KPME ಕಾಯ್ದೆ ಪ್ರಕಾರ, ಕ್ರಮಕ್ಕೆ ಶಿಫಾರಸು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.ನವರಂಗ್ ಸಿಗ್ನಲ್​ನಲ್ಲಿರುವ ಕಾಸ್ಮೆಟಿಕ್ ಸೆಂಟರ್​ಗೆ ಅಂಟಿಸಿರುವ ನೋಟಿಸ್ ಅನ್ನು ಅಲ್ಲಿನ ಸಿಬ್ಬಂದಿ ತೆಗೆದು ಹಾಕಿದ್ದಾರೆ ಎನ್ನಲಾಗಿದೆ.
ಡಾ.ಶೆಟ್ಟಿ ಕಾಸ್ಮೆಟಿಕ್ ಸೆಂಟರ್ ಅನುಮತಿ ಪಡೆದಿರುವುದು ಪಾಲಿಕ್ಲಿನಿಕ್ ಮತ್ತು ಡಿಸ್ಪೆನ್ಸರಿಗೆ ಮಾತ್ರ.ಲೈಪೊಸಕ್ಷನ್ ಸರ್ಜರಿಗೆ ಅನುಮತಿ ಪಡೆಯದ ಡಾ.‌ಶೆಟ್ಟಿ ಕ್ಲಿನಿಕ್​ನಲ್ಲಿ ಇಬ್ಬರೇ ವೈದ್ಯರಿದ್ದಾರೆ.
ಲೈಫೊಸಕ್ಷನ್ ಸರ್ಜರಿ ಮಾಡಲು ಆಪರೇಷನ್ ಥಿಯೇಟರ್, ಐಸಿಯು ಅರವಳಿಕೆ ತಜ್ಞರು ಇರಬೇಕು, ಆದರೆ, ಕಾಸ್ಮೆಟಿಕ್ ಸೆಂಟರ್​ನಲ್ಲಿ ಆಪರೇಷನ್ ಮಾಡಲು ಅನುಮತಿ ಇಲ್ಲ. ಪಾಲಿಕ್ಲಿನಿಕ್​ಗೆ ಅನುಮತಿ ಪಡೆದವರು ಮೇಜರ್ ಸರ್ಜರಿ ಮಾಡುವಂತಿಲ್ಲ. ಈ ಹಿನ್ನೆಲೆ ಬೆಂಗಳೂರಿನ ಡಿ.ಹೆಚ್.ಓ ಶ್ರೀನಿವಾಸ್ ತಂಡದಿಂದ ಬೀಗ ಬಿದ್ದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ