ಜ್ಯೂ.ಎನ್ ಟಿಆರ್ ಗೆ ತಾಯಿಯಾಗ್ತಾರಾ ನಟಿ ಪ್ರಿಯಾಮಣಿ?!

ಗುರುವಾರ, 28 ಸೆಪ್ಟಂಬರ್ 2023 (08:44 IST)
ಹೈದರಾಬಾದ್: ಬಹುಭಾಷಾ ನಟಿ ಪ್ರಿಯಾಮಣಿ ಈಗ ಜ್ಯೂ.ಎನ್ ಟಿಆರ್ ನಾಯಕರಾಗಿರುವ ದೇವರ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೊರಟಾಲ ಶಿವ ನಿರ್ದೇಶನದ ದೇವರ ಸಿನಿಮಾದಲ್ಲಿ ಜ್ಯೂ.ಎನ್ ಟಿಆರ್ ಗೆ ತಾಯಿಯಾಗಿ ಪ್ರಿಯಾಮಣಿ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅ‍ಧಿಕೃತ ಪ್ರಕಟಣೆ ನೀಡಿಲ್ಲ.

ಪಂಚಭಾಷಾ ನಟಿಯೆನಿಸಿಕೊಂಡಿರುವ ಪ್ರಿಯಾಮಣಿ ಇದುವರೆಗೆ ಹಲವು ಸ್ಟಾರ್ ನಟರಿಗೆ ನಾಯಕಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡವರು. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಪ್ರಿಯಾಮಣಿ ತಮ್ಮ ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಲು ಒಪ್ಪಿದರೂ ಅಚ್ಚರಿಯೇನಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ