ಐಎಎಸ್ ಅಧಿಕಾರಿಯಿಂದ 1 ಕೋಟಿ ಹಣ ಸುಲಿಗೆಗೈದ ನಟಿಯ ಬಂಧನ

ಶನಿವಾರ, 4 ನವೆಂಬರ್ 2017 (13:08 IST)
ವಿಚಾರಣಾಧಿಕಾರಿ ಐಎಎಸ್ ಅಧಿಕಾರಿ ರಾಧೇಶ್ಯಾಮ್ ಮೊಪಾಲ್‌ವಾರ್‌ನಿಂದ 1 ಕೋಟಿ ರೂಪಾಯಿ 'ಸುಲಿಗೆ ಹಣ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಹಣ ಸುಲಿಗೆ ವಿರೋಧ ದಳದ ಪೊಲೀಸರು, ಖಾಸಗಿ ಪತ್ತೆದಾರ ಮತ್ತು ಆತನ ಪತ್ನಿಯನ್ನು ರೆಡ್‌ಹ್ಯಾಂಡಾಗಿ ಹಿಡಿದು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.  
ಎಂಎಸ್‌ಆರ್‌ಡಿಸಿಯ ಅಮಾನತ್ತುಗೊಂಡ ವ್ಯವಸ್ಥಾಪಕ ನಿರ್ದೇಶಕ ಮೋಪಲ್‌ವಾರ್‌ಗೆ ಕರೆ ಮಾಡಿದ ಮಂಗಲೆ ದಂಪತಿಗಳು ನಿಮ್ಮ ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ದಾಖಲೆಗಳು ಫೋನ್ ಕರೆಗಳು ನನ್ನ ಬಳಿಯಿವೆ ಎಂದು ಬೆದರಿಸಿ 10 ಕೋಟಿ ನೀಡುವಂತೆ ಒತ್ತಾಯಿಸಿದ್ದಾರೆ. ಕೊನೆಗೆ 7 ಕೋಟಿ ರೂಪಾಯಿ ಕೊಡುವ ಒಪ್ಪಂದವಾಗಿದೆ ಎಂದು ಮೂಲಗಳು ತಿಳಿಸಿವೆ.
ಶೃದ್ಧಾ ಮರಾಠಿ ಚಿತ್ರಗಳಲ್ಲಿ ನಟಿಸುತ್ತಿರುವುದಲ್ಲದೇ ಟಿವಿ ಧಾರವಾಹಿಗಳಲ್ಲಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  
 
ಕಳೆದ ಆಗಸ್ಟ್ ತಿಂಗಳಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಂಎಸ್‌ಆರ್‌ಡಿಸಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮೋಪಲ್‌ವಾರ್ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಅಮಾನತ್ತುಗೊಳಿಸಿದ್ದರು.  
 
ಮೋಪಲ್‌ವಾರ್ ಅವರಿಗೆ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಖಾಸಗಿ ಪತ್ತೆದಾರ ಸತೀಶ್ ಮಂಗ್ಲೆ ಮತ್ತು ಆತನ ಪತ್ನಿ ಶ್ರದ್ಧಾ ಅವರನ್ನು ದೊಂಬಿವಲಿ ಪ್ರದೇಶದಲ್ಲಿರುವ ನಿವಾಸದಲ್ಲಿ ಬಂಧಿಸಲಾಗಿದೆ. ಪೊಲೀಸರು ಅವರ ಮನೆಯಿಂದ ಎರಡು ಲ್ಯಾಪ್‌ಟಾಪ್, ಐದು ಮೊಬೈಲ್ ಹ್ಯಾಂಡ್‌‍ಸೆಟ್, ನಾಲ್ಕು ಪೆನ್‌ಡ್ರೈವ್, 15 ಸಿಡಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ