ಸಚಿವ ಸ್ಥಾನ ಸಿಗದ ಅಣ್ಣಾಮಲೈರನ್ನು ಸೂರ್ಯವಂಶದ ಅಮಿತಾಭ್ ಬಚ್ಚನ್ ಗೆ ಹೋಲಿಸಿ ಟ್ರೋಲ್

Krishnaveni K

ಸೋಮವಾರ, 10 ಜೂನ್ 2024 (10:00 IST)
ನವದೆಹಲಿ: ತಮಿಳುನಾಡಿನಲ್ಲಿ ಬಿಜೆಪಿಗೆ ಹೊಸ ಭರವಸೆ ತಂದಿದ್ದ ಮಾಜಿ ಐಪಿಎಸ್ ಅಧಿಕಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಿನ್ನೆ ಮೋದಿ ಹೊಸ ಸರ್ಕಾರದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಆದರೆ ಅಣ್ಣಾಮಲೈಗೆ ಕೊನೆ ಕ್ಷಣದಲ್ಲಿ ಅವಕಾಶ ಮಿಸ್ ಆಯ್ತು. ತಮಿಳುನಾಡಿನಲ್ಲಿ ಅಣ್ಣಾಮಲೈ ಈ ಬಾರಿ ಚುನಾವಣೆಗೆ ನಿಂತು ಸೋಲು ಅನುಭವಿಸಿದ್ದರು. ಆದರೆ ತಮಿಳುನಾಡಿನಲ್ಲಿ ಪಕ್ಷ ಕಟ್ಟುವಲ್ಲಿ ಅವರು ತೋರಿರುವ ಶ್ರಮಕ್ಕೆ ಬಿಜೆಪಿ ಹೈಕಮಾಂಡ್ ರಾಜ್ಯಸಭೆಯಲ್ಲಿ ಸ್ಥಾನ ನೀಡಿ ಸಚಿವರನ್ನಾಗಿ ಮಾಡಲಿದೆ ಎನ್ನಲಾಗಿತ್ತು.

ಆದರೆ ಅಣ್ಣಾಮಲೈಗೆ ಕೊನೆಗೂ ಸಂಪುಟದಲ್ಲಿ ಸ್ಥಾನ ಸಿಗಲೇ ಇಲ್ಲ. ಆದರೆ ಇದನ್ನೇ ಅವರ ವಿರೋಧಿಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿಕೊಂಡು ಕಿಚಾಯಿಸಿದ್ದಾರೆ. ಅಣ್ಣಾಮಲೈ ಹೈಕಮಾಂಡ್ ಗೆ ತಮಿಳುನಾಡಿನಲ್ಲಿ ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಂದು ಫೂಲ್ ಮಾಡಿದಂತೆ ಅವರಿಗೂ ಬಿಜೆಪಿ ಹೈಕಮಾಂಡ್ ಫೂಲ್ ಮಾಡಿತು ಎಂದು ಕೆಲವರು ಹೇಳಿದ್ದಾರೆ.

ಮತ್ತೆ ಕೆಲವರು ಅಣ್ಣಾಮಲೈರನ್ನು ಸೂರ್ಯವಂಶ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಪಾತ್ರಕ್ಕೆ ಹೋಲಿಸಿದ್ದಾರೆ. ಸೂರ್ಯವಂಶ ಸಿನಿಮಾದಲ್ಲಿ ಮನೆ ಮಗನಾದರೂ ಅತ್ತೆ ಮಗಳ ಮದುವೆಯಲ್ಲಿ ಆಳಿನಂತೆ ದುಡಿಯುವ ಅಮಿತಾಭ್ ಬಚ್ಚನ್ ಜೊತೆ ಅಣ್ಣಾಮಲೈರನ್ನು ಹೋಲಿಕೆ ಮಾಡಿ ಲೇವಡಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ