ಫ್ರಾನ್ಸ್, ಅಮೆರಿಕಾ ಆಯ್ತು, ಈಗ ಮಾರಿಷಸ್‌ನತ್ತ ಪ್ರಧಾನಿ ಮೋದಿ: ಈ ಭೇಟಿ ಉದ್ದೇಶವೇನು ಗೊತ್ತಾ
ನಮ್ಮ ದೇಶದ ಸ್ವಾತಂತ್ರ್ಯದ 57ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲು ಭಾರತದ ಪ್ರಧಾನಿ ಮೋದಿ ಅವರು ಒಪ್ಪಿದ್ದಾರೆ. ಇದು ಉಭಯ ದೇಶಗಳ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಾಕ್ಷಿಯಾಗಲಿದೆ ಎಂದು ರಾಮ್‌ಗೂಲಂ ಅವರು ಶುಕ್ರವಾರ ಸದನದಲ್ಲಿ ಹೇಳಿದ್ದಾರೆ.
ಮೋದಿ ಅವರು ಕಾರ್ಯದ ಒತ್ತಡದ ನಡುವೆಯು ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಇಂತಹ ಪ್ರತಿಷ್ಠತ ವ್ಯಕ್ತಿಗೆ ಅತಿಥ್ಯ ವಹಿಸುವುದು ನಿಜಕ್ಕೂ ನಮ್ಮ ದೇಶದ ಹೆಮ್ಮೆ ಎಂದು ಹೇಳಿಕೊಂಡಿದ್ದಾರೆ.