ದೆಹಲಿ: ಸದ್ಯಕ್ಕೆ ದೆಹಲಿಯಲ್ಲಿರುವ ಉಪ ಮುಖ್ಯಮಂತ್ರಿ ಡಿಕೆ ಡಿಕೆ ಶಿವಕುಮಾರ್ ಅವರನ್ನು ಜೆಡಿಎಸ್ ಮುಖಂಡರಾದ ಸಾ ರಾ ಮಹೇಶ್ ಮತ್ತು ಬಂಡೆಪ್ಪ ಕಾಶೆಂಪುರ ಭೇಟಿಯಾಗಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಸದ್ಯ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾಲಿಟಿಕ್ಸ್ ಭಾರೀ ಜೊರಾಗಿ ಸದ್ದು ಮಾಡುತ್ತಿದೆ. ಸಿಎಂ ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ತೀವ್ರ ಪೈಪೋಟಿ ಇದೆ. ಇದರೆಲ್ಲದರ ನಡುವೆ ಡಿಕೆ ಶಿವಕುಮಾರ್ ಜತೆ ಜೆಡಿಎಸ್ ನಾಯಕರು ಕಾಣಿಸಿಕೊಂಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಎಚ್ ಡಿ ಕುಮಾರಸ್ವಾಮಿ ಅವರು ಈಚೆಗೆ ಆರೋಪ ಮಾಡಿದ ಬೆನ್ನಲ್ಲೇ ಡಿಕೆಶಿ ಜತೆ ಜೆಡಿಎಸ್ ನಾಯಕರು ಕಾಣಿಸಿಕೊಂಡಿದ್ದು, ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದೀಗ ಜೆಡಿಎಸ್ ನಾಯಕರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.
ದೆಹಲಿಯಲ್ಲಿ ಮೂವರು ಒಟ್ಟಿಗೆ ನಿಂತಿರುವುದನ್ನು ಮಾಧ್ಯಮ ಕ್ಯಾಮರಾಗಳಲ್ಲಿ ಫೋಟೋ ಸೆರೆಹಿಡಿಯುವಾಗ ಶಿವಕುಮಾರ್ ಸಿಡಿಸಿದ ಜೋಕ್ ಗೆ ಜೆಡಿಎಸ್ ಮುಖಂಡರು ನಗುತ್ತಾರೆ. ನಂತರ ಶಿವಕುಮಾರ್ ನಮ್ಮ ಪೋಟೋ ತೆಗೆದಿದ್ದು ಆಯ್ತಲ್ಲ, ಹೊರಡಿ ಇನ್ನು ಅಂತ ಮಾಧ್ಯಮದವರಿಗೆ ಹೇಳುತ್ತಾರೆ.