Agra: ಎರಡನೇ ತರಗತಿ ಮಗುವನ್ನು ಮರಕ್ಕೆ ಕಟ್ಟಿ ಹೊಡೆದ ಶಿಕ್ಷಕ
ಮೈನ್ ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಸ್ವಾಮಿ ಅಮರ್ ಸ್ವರೂಪ್ ನಂದ್ ಜೀ ಶ್ರೀ ನಿಹಾಲ್ ಸಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ಧ್ರುವ್ ಕುಮಾರ್ ಎಂಬ ಶಿಕ್ಷಕಿ ಆರೋಪಿ. ಸರಿಯಾಗಿ ಓದುತ್ತಿಲ್ಲ ಎಂಬ ಕಾರಣಕ್ಕೆ ಎರಡನೇ ತರಗತಿ ಮಗುವನ್ನು ಶಿಕ್ಷಕ ಧ್ರುವ್ ಕುಮಾರ್ ಮರಕ್ಕೆ ಕಟ್ಟಿ ಹಾಕಿದ್ದ.
ಬಳಿಕ ಕೋಲಿನಿಂದ ಮನಬಂದಂತೆ ಬಾರಿಸಿದ್ದ. ಪರಿಣಾಮ ಹುಡುಗನ ಮೈ ಮೇಲೆಲ್ಲಾ ಗಾಯಗಳಾಗಿವೆ. ಮನೆಗೆ ಬಂದ ಮೇಲೆ ಬಾಲಕನ ಪರಿಸ್ಥಿತಿ ನೋಡಿ ಕಂಗಾಲಾದ ಪೋಷಕರು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಯಾರಿಗೂ ಹೇಳಬಾರದು, ಹೇಳಿದರೆ ಜೀವ ತೆಗೆಯುವುದಾಗಿ ಶಿಕ್ಷಕ ಬೆದರಿಕೆ ಹಾಕಿರುವುದಾಗಿ ಮಗು ಬಾಯ್ಬಿಟ್ಟಿದೆ.