ಅತ್ತೆ ಸಾಯಿಸಲು ಮಾತ್ರೆ ಕೊಡಿ ಎಂದು ಕೇಳಿದ್ದ ಪ್ರಕರಣ: ಹೊಸ ವಿಚಾರ ಬಯಲು

Krishnaveni K

ಗುರುವಾರ, 20 ಫೆಬ್ರವರಿ 2025 (11:42 IST)
ಬೆಂಗಳೂರು: ನನ್ನ ಅತ್ತೆ ಕಾಟ ತಡೆಯಲಾಗುತ್ತಿಲ್ಲ, ಸಾಯಿಸಲು ಮಾತ್ರೆ ಕೊಡಿ ಎಂದು ಸೊಸೆಯೊಬ್ಬಳು ವೈದ್ಯರಿಗೆ ಮೆಸೇಜ್ ಮಾಡಿದ್ದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದಲ್ಲಿ ಹೊಸ ವಿಚಾರ ಬಯಲಾಗಿದೆ.

ಬೆಂಘಳೂರಿನ ವೈದ್ಯ ಸುನಿಲ್ ಕುಮಾರ್ ಎಂಬವರು ತಮ್ಮ ವ್ಯಾಟ್ಸಪ್ ಗೆ ಮೆಸೇಜ್ ಮಾಡಿ ನನ್ನ ಅತ್ತೆಯನ್ನು ಸಾಯಿಸಲು ಮಾತ್ರೆ ಕೊಡಿ ಎಂದು ಕೇಳಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ವೈದ್ಯರು ನಿರಾಕರಿಸಿದಾಗ ಅವರ ನಂಬರ್ ಬ್ಲಾಕ್ ಮಾಡಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು.

ಇನ್ನು, ವೈದ್ಯರಿಗೆ ಈ ರೀತಿ ಮೆಸೇಜ್ ಮಾಡಿದ ಮಹಿಳೆಯ ಜಾಡು ಹಿಡಿದು ಪೊಲೀಸರು ತನಿಖೆ ನಡೆಸಿದ್ದು ಕೊನೆಗೂ ಆಕೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ನಡೆಸಿದಾಗ ಮಹಿಳೆ ಅತ್ತೆಯ ಹೆಸರು ಹೇಳಿಕೊಂಡು ತನಗೇ ಆತ್ಮಹತ್ಯೆ ಮಾಡಿಕೊಳ್ಳಲು ಮಾತ್ರೆ ಕೇಳಿದ್ದಳು ಎಂಬುದು ಬಯಲಾಗಿದೆ.

ಮಹಿಳೆ ಖಿನ್ನತೆಯಿಂದ ಬಳಲುತ್ತಿದ್ದಳು. ಅತ್ತೆ ಜೊತೆಗೆ ಯಾವುದೇ ಕಿರಿಕ್ ಇರಲಿಲ್ಲ. ಆದರೆ ಖಿನ್ನತೆಯಿಂದ ಬಳಲುತ್ತಿದ್ದ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ತನಗೇ ಮಾತ್ರೆ ಕೇಳಿದ್ದಳು ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ