ನನ್ನ ಮದುವೆ ಮುರಿದು ಬೀಳಲು ನಾದಿನಿಯೇ ಕಾರಣ ಎಂದ ಐಶ್ವರ್ಯಾ ರೈ

ಮಂಗಳವಾರ, 1 ಅಕ್ಟೋಬರ್ 2019 (09:15 IST)
ಪಾಟ್ನಾ: ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತು ಪತ್ನಿ ಐಶ್ವರ್ಯಾ ನಡುವಿನ ದಾಂಪತ್ಯ ಜೀವನ ವಿಚ್ಛೇದನದ ಹಂತ ತಲುಪಿರುವುದು ಎಲ್ಲರಿಗೂ ಗೊತ್ತೇ ಇದೆ.


ಮದುವೆಯಾದ ಕೆಲವೇ ದಿನಗಳಲ್ಲಿ ತೇಜ್ ಪ್ರತಾಪ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಅತ್ತೆ ರಾಬ್ರೀ ದೇವಿ ಸೊಸೆ ಐಶ್ವರ್ಯಾರನ್ನು ಮನೆಯೊಳಗೆ ಸೇರಿಸಲಿಲ್ಲ. ಇದೇ ಕಾರಣಕ್ಕೆ ಐಶ್ವರ್ಯಾ ತಮ್ಮ ತಂದೆಯ ಜತೆಗೆ ರಾಬ್ರೀ ದೇವಿ ನಿವಾಸದ ಹೊರಗೆ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಮಧ‍್ಯಪ್ರವೇಶಿಸಿ ರಾಬ್ರೀ ದೇವಿ ಮನಒಲಿಸಿ ಐಶ್ವರ್ಯಾರನ್ನು ಮನೆ ಒಳಗೆ ಸೇರಿಸಿದ್ದರು.

ಇದೀಬ ಮಾಧ್ಯಮಗಳ ಮುಂದೆ ಮಾತನಾಡಿದ ಐಶ್ವರ್ಯಾ ತಮ್ಮನ್ನು ಪತಿಯಿಂದ ದೂರವಾಗುವಂತೆ ಮಾಡಿದ್ದು ನಾದಿನಿ, ಲಾಲೂ ಯಾದವ್ ಪುತ್ರಿ ಮಿಸಾ ಭಾರತಿ. ಆಕೆಯಿಂದಾಗಿಯೇ ತೇಜ್ ಪ್ರತಾಪ್ ಮತ್ತು ತೇಜಸ್ವಿ ನಡುವೆ ವೈಮನಸ್ಯ ಬಂದಿತ್ತು. ತನಗೆ ಆಕೆ ಹಿಂಸೆ ನೀಡಿದ್ದಾಳೆ. ತನ್ನನ್ನು ಈಗ ಮನೆಯಿಂದ ಹೊರಹಾಕಿದ್ದೂ ಆಕೆಯೇ. ಅವಳೇ ನಮ್ಮಿಬ್ಬರನ್ನು ದೂರ ಮಾಡಿದಳು ಎಂದು ದೂರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ