ವಾಜಪೇಯಿಗೋಸ್ಕರ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಬೇಕಿತ್ತು: ಯುಪಿ ಸರ್ಕಾರಕ್ಕೆ ಅಖಿಲೇಶ್ ಯಾದವ್ ಟಾಂಗ್
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟಿ20 ಪಂದ್ಯದ ವೇಳೆ ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರ ತಮ್ಮ ಹಿರಿಯ ಮುತ್ಸುದ್ದಿ ನಾಯಕನ ಹೆಸರಿನಿಂದ ಕ್ರೀಡಾಂಗಣವನ್ನು ಮರು ನಾಮಕರಣ ಮಾಡಿತ್ತು.
ಈ ಕ್ರೀಡಾಂಗಣವನ್ನು ಅಖಿಲೇಶ್ ಯಾದವ್ ಸಿಎಂ ಆಗಿದ್ದಾಗ ನಿರ್ಮಾಣ ಮಾಡಲಾಗಿತ್ತು. ವಾಜಪೇಯಿಗೆ ಗೌರವ ಸಲ್ಲಿಸಲೇಬೇಕಿದ್ದರೆ ಬೇರೆಯದೇ ಕ್ರೀಡಾಂಗಣ ನಿರ್ಮಿಸಬೇಕಿತ್ತು. ಅದರ ಬದಲು ಹಳೇ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಿದ್ದೇಕೆ ಎಂದು ಅಖಿಲೇಶ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.