ಅಖಿಲೇಶ್ ಯಾದವ್ ಮೊಘಲ್ ದೊರೆ ಔರಂಗಜೇಬ್‌ನಂತೆ: ಕೇಂದ್ರ ಸಚಿವೆ

ಬುಧವಾರ, 4 ಜನವರಿ 2017 (16:19 IST)
ಸಮಾಜವಾದಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ತಂದೆ ಮುಲಾಯಂ ಸಿಂಗ್ ಯಾದವ್ ಅವರಿಂದ ಕಿತ್ತುಕೊಂಡ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮೊಘಲ್ ದೊರೆ ಔರಂಗಜೇಬ್‌ನಂತೆ ಎಂದು ಕೇಂದ್ರ ಸಚಿವೆ ನಿರಂಜನ್ ಜ್ಯೋತಿ ಹೇಳಿದ್ದಾರೆ.
 
ಅಖಿಲೇಶ್ ತಮ್ಮ ಕುಟುಂಬದಲ್ಲಿಯೇ ಜನಪ್ರಿಯರಾಗಿಲ್ಲ. ಕೇವಲ ಜಾಹೀರಾತುಗಳಲ್ಲಿ ತುಂಬಾ ಜನಪ್ರಿಯರಾಗಿದ್ದಾರೆ. ಕುಟುಂಬವನ್ನು ವಿಭಜಿಸುತ್ತಿರುವ ಅವರು ಮೊಘಲ್ ದೊರೆ ಔರಂಗಜೇಬ್‌ನಂತೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಮುಲಾಯಂ ಸಿಂಗ್ ಯಾದವ್ ಇಂತಹ ರಣತಂತ್ರವನ್ನು ರೂಪಿಸಿದ್ದು, ಮುಂಬರುವ ಒಂದೆರಡು ದಿನಗಳಲ್ಲಿ ಮತ್ತೆ ಅವರು ಒಂದಾಗಲೂಬಹುದು. ಮಾಯಾವತಿ ಬಿಎಸ್‌ಪಿ ಪಕ್ಷದ ಅಭ್ಯರ್ಥಿಗಳ ಜಾತಿಯ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದರ ವಿರುದ್ಧ ಸುಪ್ರೀಂಕೋರ್ಟ್ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.  
 
ರಾಜ್ಯದ ಅಭಿವೃದ್ಧಿ ಮತ್ತು ಕಾನೂನು ವ್ಯವಸ್ಥೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಕಣಕ್ಕಿಳಿದು ಬಹುಮತ ಪಡೆದು ಸರಕಾರ ರಚಿಸಲಿದೆ. ರಾಮ ಮಂದಿರ ನಂಬಿಕೆಯ ವಿಷಯವಾಗಿದ್ದರಿಂದ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವೆ ನಿರಂಜನ್ ಜ್ಯೋತಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ