ಭೂಕುಸಿತ ಹಿನ್ನಲೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಶುಕ್ರವಾರ, 30 ಜೂನ್ 2017 (11:52 IST)
ಶ್ರೀನಗರ: ಭಾರೀ ಮಳೆ ಹಾಗೂ ಭೂ ಕುಸಿತದ ಪರಿಣಾಮ ಪವಿತ್ರ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಅಮರನಾಥ ಯಾತ್ರೆ ನಿನ್ನೆಯಷ್ಟೇ ಆರಂಭಗೊಂಡಿತ್ತು. ಆದರೆ ಭಾರೀ ಮಳೆಯಿಂದಾಗಿ ಜಮ್ಮುವಿನ ಪಹಲ್ಗಾಮ್ ಮತ್ತು ಬಲ್ತಲ್ ಅವಳಿ ಮಾರ್ಗಗಳಲ್ಲಿ ಇಂದು ತೀವ್ರ ಭೂಕುಸಿತ ಉಂಟಾಗಿರುವುದರಿಂದ ಯಾತ್ರೆ ಸ್ಥಗಿತಗೊಂಡಿದೆ ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿಯ(ಎಸ್ಎಎಸ್ ಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಯಾತ್ರಿಕರು ಬಲ್ತಲ್ ಮತ್ತು ನುನ್ ವಾನ್ ನಲ್ಲಿನ ಮೂಲ  ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಯಾತ್ರೆಯ ಸ್ಥಿತಿಗತಿ ಕುರಿತು ನಿಯಂತ್ರಣ ಕೊಠಡಿ ಅಥವಾ ಸಹಾಯವಾಣಿ ಮೂಲಕ ಜನರಿಗೆ ತಿಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
 
ಇನ್ನೊಂದೆಡೆ ಭಾರೀ ಭೂಕುಸಿತದಿಂದಾಗಿ 300 ಕಿಲೋ ಮೀಟರ್ ಉದ್ದದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕೂಡ ರಂಬನ್ ಮತ್ತು ಉದಂಪುರ್ ಜಿಲ್ಲೆಗಳಲ್ಲಿ ಬಂದ್ ಆಗಿವೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ನಶ್ರಿ, ಬಾಲಿ ನಲ್ಹ ಮತ್ತು ಪಂತಿಯಲ್ ಪ್ರದೇಶದಲ್ಲಿ ಭೂ ಕುಸಿತವುಂಟಾಗಿ ಹೆದ್ದಾರಿ ಮುಚ್ಚಲ್ಪಟ್ಟಿದೆ. 
 

ವೆಬ್ದುನಿಯಾವನ್ನು ಓದಿ