ಒಂದೇ ವಾರದಲ್ಲಿ ಜಗನ್ ರೆಡ್ಡಿ ಪಕ್ಷ ತೊರೆದ ಕ್ರಿಕೆಟಿಗ ಅಂಬಟಿ ರಾಯುಡು
ಸಾಮಾನ್ಯವಾಗಿ ರಾಜಕಾರಣಿಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವಲಸೆ ಹೋಗುವುದು ಹೊಸತೇನಲ್ಲ. ಆದರೆ ಅಂಬಟಿ ರಾಯುಡು ಸೇರಿದ ಒಂದೇ ವಾರಕ್ಕೆ ಪಕ್ಷ ತೊರೆದಿದ್ದಾರೆ. ಸಿಎಂ ಜಗನ್ ರೆಡ್ಡಿ ಸಮ್ಮುಖದಲ್ಲಿ ಕಳೆದ ವಾರವಷ್ಟೇ ಅವರು ವೈಎಸ್ ಆರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪಕ್ಷ ತೊರೆಯುತ್ತಿರುವುದಾಗಿ ಸಂದೇಶ ಬರೆದಿದ್ದಾರೆ. ಅವರು ಗುಂಟೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಊಹಾಪೋಹಗಳಿತ್ತು. ಆದರೆ ಇದೀಗ ವೈಎಸ್ ಆರ್ ಪಕ್ಷದಿಂದ ಅವರಿಗೆ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ.
ಇದೇ ಕಾರಣಕ್ಕೆ ಅವರು ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಮುಂದಿನ ನಡೆಯನ್ನು ತಿಳಿಸುತ್ತೇನೆ ಎಂದು ಅವರು ಹೇಳಿದ್ದಾರೆ.