ಎಲೋನ್ ಮಸ್ಕ್ ಬಗ್ಗೆ ಸಿಟ್ಟಾದ ಅಮಿತಾಭ್

ಮಂಗಳವಾರ, 25 ಏಪ್ರಿಲ್ 2023 (11:52 IST)
ಚಂದಾದಾರರಿಗೆ ಮಾತ್ರ ಬ್ಲೂ ಟಿಕ್ ಎಂದು ಹೇಳುವ ಮೂಲಕ ಟ್ವಿಟರ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ್ದರು ಮಾಲೀಕ ಎಲೋನ್ ಮಸ್ಕ್. ತಾವು ಹೇಳಿದಂತೆ ಉಚಿತವಾಗಿ ಬ್ಲೂಟಿಕ್ ಪಡೆದವರ ಖಾತೆಯಿಂದ ಅದನ್ನು ತೆಗೆದುಹಾಕಿದ್ದರು.
 
ಈ ನಡೆಗೆ ಸಾಕಷ್ಟು ಸಿಲೆಬ್ರಿಟಿಗಳು ಆಕ್ರೋಶ ವ್ಯಕ್ತ ಪಡಿಸಿದ್ದರು. ಹಲವರಂತೂ ತಾವು ಹಣ ಪಡೆದು ಬ್ಲೂ ಟಿಕ್ ಪಡೆದುಕೊಳ್ಳುವುದಿಲ್ಲ ಎಂದು ನೇರವಾಗಿಯೇ ತಿಳಿಸಿದ್ದರು. ಆಕ್ರೋಶ ವ್ಯಕ್ತ ಪಡಿಸಿದವರ ಜೊತೆಗೆ ಕೆಲವರು ಹಣ ಪಾವತಿಸಿ ಬ್ಲೂಟಿಕ್ ಪಡೆದಿದ್ದರು.

ಅದರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಒಬ್ಬರು. ಟ್ವಿಟರ್ ಸಂಸ್ಥೆ ತಿಳಿಸಿದಂತೆ ತಿಂಗಳಿಗೆ 900 ರೂಪಾಯಿ ಪಾವತಿಸಿ ಅಮಿತಾಭ್ ಚಂದಾದಾರರಾಗಿದ್ದರು.

ಹಣ ನೀಡಿದ್ದರಿಂದ ಅಮಿತಾಭ್ ಅವರ ಟ್ವಿಟರ್ ಖಾತೆಗೆ ಬ್ಲೂಟಿಕ್ ಸಿಕ್ಕಿತ್ತು. ಇದೀಗ ಎಲೋನ್ ಮಸ್ಕ್ ಮತ್ತೊಂದು ನಿರ್ಧಾರವನ್ನು ಪ್ರಕಟಿಸಿದ್ದಾರೆ. ಈ ನಿರ್ಧಾರಕ್ಕೆ ಅಮಿತಾಭ್ ಸಿಟ್ಟಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ