ನವದೆಹಲಿ: ಮದುವೆಗೆ ಇನ್ನೂ ಕೆಲವೇ ವಾರಗಳಿರುವಾಗ ಭಾರತೀಯ ಮೂಲದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಂಜಲಿ ಚಕ್ರ ಹಾಗೂ ಪಾಕಿಸ್ತಾನ ಮೂಲದ ಸೂಫಿ ಮಲಿಕ್ ಸಲಿಂಗ ಜೋಡಿ ತಮ್ಮ ಸಂಬಂಧವನ್ನು ಮುರಿದುಕೊಂಡಿದೆ.
2019ರಲ್ಲಿ ಈ ಜೋಡಿ ದಕ್ಷಿಣ ಏಷ್ಯಾದ ಸಂಸ್ಕೃತಿ ಆಚರಣೆಯೊಂದಿಗೆ ತಮ್ಮ ಸಲಿಂಗ ಪ್ರೀತಿಯನ್ನು ಬಹಿರಂಗಪಡಿಸಿ ದೊಡ್ಡ ಮಟ್ಟದ ಸುದ್ದಿ ಮಾಡಿತ್ತು. ಇದೀಗ ತಮ್ಮ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಇಬ್ಬರು ಸಂಬಂಧವನ್ನು ಕಡಿದುಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಪಾಕ್ ಮೂಲಕ ಸೂಫಿಯ ದಾಂಪತ್ಯ ದ್ರೋಹವೇ ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಗಡಿ ಹಾಗೂ ಸಾಂಸ್ಕೃತಿಕ ಮಾನದಂಡಗಳನ್ನು ಮೀರಿ ಇವರಿಬ್ಬರಲ್ಲಿ ಪ್ರೀತಿ ಮೂಡಿತ್ತು. ಸಲಿಂಗ ಪ್ರೀತಿ ಬಗ್ಗೆ ಭಾರೀ ಚರ್ಚೆಗಳ ನಡುವೆ ಕಳೆದ ಬಾರಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು.
ಇನ್ನೇನು ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಂಬಂಧದಲ್ಲಿ ಬಿಡುಕು ಕಂಡು ದೂರವಾಗಿದ್ದಾರೆ. ಈ ಬಗ್ಗೆ ಅಂಜಲಿಗೆ ಮೋಸ ಮಾಡಿರುವುದಾಗಿ ಸ್ವತಃ ಸೂಫಿ ಒಪ್ಪಿಕೊಂಡಿದ್ದಾರೆ.