ಹೆಚ್ಚು ತೆರಿಗೆ ಸಂಗ್ರಹವಾಗ್ತಿದ್ರೆ, ದೇಶದ ಅಭಿವೃದ್ಧಿಯ ಸಂಕೇತ : ಬೊಮ್ಮಾಯಿ

ಸೋಮವಾರ, 7 ಆಗಸ್ಟ್ 2023 (10:33 IST)
ಬೆಂಗಳೂರು : ತೆರಿಗೆ ಕಾನೂನುಗಳು ಸರಳವಾದಷ್ಟು ಸಾಮಾನ್ಯರಿಗೆ ಅನುಕೂಲವಾಗಲಿದ್ದು, ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೆ ದೇಶ ಅಭಿವೃದ್ಧಿ ಆಗುತ್ತಿದೆ ಎಂದು ಅರ್ಥ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.
 
ರಾಷ್ಟ್ರೀಯ ತೆರಿಗೆ ಸಲಹೆಗಾರರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ಆರ್ಥಿಕ ಬೆಳವಣಿಗೆ ಹೊಂದಲು ಬಯಸುತ್ತಾನೆ. ನಾನು ಹಣಕಾಸು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ.

ನಾನು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮನಸು ಮಾಡಿದರೆ ಯಾವುದೂ ಕಷ್ಟವಲ್ಲ ಎಂದು ಯೋಚಿಸಿ ಕಾರ್ಯ ಪ್ರವೃತ್ತನಾದೆ. ಮೂರು ತಿಂಗಳಲ್ಲಿ 70% ರಷ್ಟು ಆದಾಯ ಹೆಚ್ಚಳ ಮಾಡಿದೆ.

ರಾಜ್ಯದ ಆದಾಯ ಹೆಚ್ಚಿಸಿ ಎರಡು ವರ್ಷದ ಅವಧಿಯಲ್ಲಿ ಸರಪ್ಲಸ್ ಬಜೆಟ್ ಮಂಡನೆ ಮಾಡಿದೆ. ಈಗಿನ ಸರ್ಕಾರ ಉಚಿತ ಯೋಜನೆಗಳಿಗೆ ಹೆಚ್ಚಿನ ಹಣ ವೆಚ್ಚ ಮಾಡುತ್ತಿದ್ದು, ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತದೆ ಎಂದರು.

ರಾಜ್ಯದ ಆರ್ಥಿಕತೆ ಹೆಚ್ಚಿಸಲು ಸಹಕಾರ ನೀಡಿದ ತೆರಿಗೆದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆರ್ಥಿಕತೆ ಬೆಳವಣಿಗೆಯಲ್ಲಿ ತೆರಿಗೆದಾರರ ಪಾತ್ರ ಮಹತ್ವದ್ದಾಗಿದೆ. ಅಂತಿಮವಾಗಿ ದೇಶದ ಅಭಿವೃದ್ಧಿ ಆಗಬೇಕು. ಅದರಲ್ಲಿ ತೆರಿಗೆದಾರರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ