ಅಕ್ರಮ ಸಂಬಂಧ ಹೊಂದಿದ್ದಕ್ಕೆ ನಾಯಿಯನ್ನೇ ಮನೆಯಿಂದ ಹೊರಹಾಕಿದ ಮಾಲೀಕ

ಗುರುವಾರ, 25 ಜುಲೈ 2019 (06:35 IST)
ತಿರುವನಂತಪುರಂ : ಮೂರು ವರ್ಷದ ಸಾಕು ನಾಯಿ ನೆರೆಹೊರೆಯ ನಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಮಾಲೀಕ ಆ ನಾಯಿಯನ್ನು ಮನೆಯಿಂದ ಹೊರಹಾಕಿದ ಘಟನೆ ತಿರುವನಂತಪುರಂ ನಲ್ಲಿ ನಡೆದಿದೆ.
ಬಿಳಿ ಪೊಮೆರೇನಿಯನ್ ಜಾತಿಯ ನಾಯಿಯಾಗಿದ್ದು, ಅದು  ಅಕ್ರಮ ಸಂಬಂಧ ಹೊಂದಿದ್ದಕ್ಕೆ ಬೇಸರಗೊಂಡು ಮನೆಯಿಂದ ಹೊರಹಾಕಿರುವುದಾಗಿ ಮಾಲೀಕ ಟಿಪ್ಪಣಿಯೊಂದನ್ನು ಬರೆದು ಅದರ ಕುತ್ತಿಗೆಗೆ ತೂಗುಹಾಕಿದ್ದಾನೆ. ಇದನ್ನು ಕಂಡ ದಾರಿಹೋಕರು ಪೀಪಲ್ ಫಾರ್ ಅನಿಮಲ್ಸ್(ಪಿಎಫ್ ಎ) ಎಂಬ ಎನ್.ಜಿ.ಒ.ಗೆ ತಿಳಿಸಿದ್ದಾರೆ.


ಪಿಎಫ್ ಎ ನ ಸ್ವಯಂಸೇಕ ಶಮನ್ ಫಾರೂಫ್ ಈ ನಾಯಿಯನ್ನು ರಕ್ಷಿಸಿದ್ದಾರೆ. ಆದರೆ ಈ ನಾಯಿಯನ್ನು ಸಾಕಲು ಹಲವು ಮಂದಿ ನಾಯಿ ಪ್ರಿಯರು ಮುಂದೆ ಬಂದರೂ ಕೂಡ ಫಾರೂಫ್ ಅದನ್ನು ಯಾರಿಗೂ ನೀಡದೆ, ಮನಸ್ಸು ಬದಲಿಸಿ ಅದರ ಮಾಲೀಕ ಮತ್ತೆ ಅದನ್ನು ಕರೆದುಕೊಂಡು ಹೋಗಲು ಬರಬಹುದು ಎಂಬಭರವಸೆಯಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ