ಅಂಗವಿಕಲರಿಗೆ ಕೆಲಸ ಕೊಟ್ಟು ಮಾನವೀಯತೆಯನ್ನು ಮೆರೆದ ಆನಂದ್ ಮಹೀಂದ್ರಾ

ಗುರುವಾರ, 3 ಫೆಬ್ರವರಿ 2022 (08:33 IST)
ನವದೆಹಲಿ : ಕೈಕಾಲುಗಳಿಲ್ಲದ ವ್ಯಕ್ತಿಯೊಬ್ಬನಿಗೆ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಕೆಲಸ ಕೊಟ್ಟಿದ್ದಾರೆ. ಈ ಕುರಿತು ಮಹೀಂದ್ರಾ ಅವರೇ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.
 
ಆನಂದ್ ಮಹೀಂದ್ರಾ ಟ್ವಿಟ್ಟರ್ನಲ್ಲಿ ಆಗಾಗ್ಗೆ ತಾವು ಮಾಡುವ ಕೆಲಸಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ. ಇಂದು ಮಹೀಂದ್ರಾ ಅವರು ಟ್ವಿಟ್ಟರ್ನಲ್ಲಿ, ನಾವು ನಮ್ಮ ಕಂಪನಿಗೆ ಅಂಗವಿಕಲ ವ್ಯಕ್ತಿಯನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದೇವೆ ಎಂದು ಬರೆದು ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಮಹೀಂದ್ರಾ ಟ್ವಿಟ್ಟರ್ನಲ್ಲಿ, ಯೂಟ್ಯೂಬ್ನಲ್ಲಿ ಈ ಸಂಭಾವಿತ ವ್ಯಕ್ತಿಯ ಬಗ್ಗೆ ಅನೇಕ ಫಾಲೋ ಅಪ್ ವೀಡಿಯೋಗಳು ಮತ್ತು ನೆಗೆಟಿವ್ ಕಮೆಂಟ್ಗಳು ಬರುತ್ತಿದ್ದವು. ಆದರೆ ನಾನು ಬಿರ್ಜು ರಾಮ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಬಿರ್ಜು ರಾಮ್ ಅವರಿಗೆ ಕೆಲಸ ಕೊಟ್ಟಿರುವ ವಿಚಾರ ಟ್ವೀಟ್ ಮಾಡಿದ ಮೇಲೆ ನೆಟ್ಟಿಗರು ವ್ಯಾಪಾಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ದೊಡ್ಡ ಗೌರವ, ನೀವು ಯಾವಾಗಲೂ ಜನರನ್ನು ಪ್ರೇರೇಪಿಸುತ್ತೀರಿ, ಅಭಿನಂದನೆಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, ಸರ್ ನಿಮ್ಮ ಮೇಲೆ ಇದ್ದ ಗೌರವ ದುಪ್ಪಟ್ಟಾಗಿದೆ. ನೀವು ಜನರ ಜೀವನದಲ್ಲಿ ನಿಜವಾದ ಬದಲಾವಣೆಯನ್ನು ತರುತ್ತಿದ್ದೀರಿ.

ನೀವು ಹೀರೋ ಮತ್ತು ವಿಶ್ವದ ಅನೇಕ ಜನರಿಗೆ ಸ್ಫೂರ್ತಿ, ಜನರ ಪ್ರಯತ್ನಕ್ಕೆ ಸಹಾಯ ಮಾಡಲು ಮತ್ತು ಪ್ರಶಂಸಿಸಲು ನಿಮ್ಮ ರೀತಿಯ ಗೆಸ್ಚರ್ಗೆ ಸೆಲ್ಯೂಟ್ ಎಂದು ಹಲವು ಜನರು ಕಮೆಂಟ್ ಮಾಡಿ ಪ್ರಶಂಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ