ಪ್ರಧಾನಿ ಮೋದಿಯಿಂದ ಭ್ರಷ್ಟರ ವಿರುದ್ಧ ಮತ್ತೊಂದು ಬ್ರಹ್ಮಾಸ್ತ್ರ

ಭಾನುವಾರ, 5 ನವೆಂಬರ್ 2017 (11:36 IST)
ನೋಟು ನಿಷೇಧಗೊಳಿಸಿ ಭ್ರಷ್ಟಾಚಾರಿಗಳ ಬೆನ್ನು ಮುರಿದಿದ್ದ ಪ್ರಧಾನಿ ಮೋದಿ, ಇದೀಗ ಭ್ರಷ್ಟರ ವಿರುದ್ಧ ಮತ್ತೊಂದು ಬ್ರಹ್ಮಾಸ್ತ್ರ ಹೊರಡಿಸಲು ಸಿದ್ದರಾಗಿದ್ದಾರೆ.
ಶೀಘ್ರದಲ್ಲಿಯೇ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೊಳ್ಳಲಿದ್ದು, ಬೇನಾಮಿ ಆಸ್ತಿ ಹೊಂದಿದವರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
 
ಅನೇಕ ರಾಜಕಾರಣಿಗಳು ಭ್ರಷ್ಟಾಚಾರದಿಂದ ಖರೀದಿಸಿದ ಆಸ್ತಿಯನ್ನು ತಮ್ಮ ಕಾರು ಚಾಲಕರ ಅಥವಾ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿರುವುದು ಕಂಡು ಬಂದಿದೆ. ಒಂದು ವೇಳೆ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿಗೆ ಬಂದಲ್ಲಿ ಬೇರೆಯವರ ಹೆಸರಲ್ಲಿ ಮಾಡಿದ ಆಸ್ತಿಯನ್ನು ಮರಳಿ ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಭ್ರಷ್ಟರಿಗೆ ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ.
 
ಈಗಾಗಲೇ ಬೇನಾಮಿ ಆಸ್ತಿ ನಿಯಂತ್ರಣ ಕಾಯ್ದೆ ಜಾರಿ ಕುರಿತಂತೆ ಅಧಿಕಾರಿಗಳು ಸಿದ್ದತೆ ನಡೆಸುತ್ತಿದ್ದ ಮುಂದಿನ ವರ್ಷ|ದವರೆಗೆ ಕಾನೂನು ಜಾರಿಗೆ ಬರಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ