ಮಹಾರಾಷ್ಟ್ರದಲ್ಲಿ ಮತ್ತೋರ್ವ ಶಂಕಿತ ಉಗ್ರ ಬಂಧನ

ಸೋಮವಾರ, 20 ಸೆಪ್ಟಂಬರ್ 2021 (14:43 IST)
ಮುಂಬೈ, ಸೆ 20 : ದೆಹಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವಾರು ಕಡೆಗಳಲ್ಲಿ ಹಬ್ಬದ ಸಂದರ್ಭದಲ್ಲಿ ಸ್ಪೋಟ ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ನಂಟು ಹೊಂದಿರುವ ಅನುಮಾನದಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು (ಎಟಿಎಸ್) ಮತ್ತೋರ್ವ ಶಂಕಿತ ಉಗ್ರನನ್ನು ಬಂಧನ ಮಾಡಿದೆ.

ಬಂಧಿತ ಶಂಕಿತ ಉಗ್ರನನ್ನು ರಿಸ್ವಾನ್ ಇಬ್ರಾಹಿಂ ಮೋಮಿನ್ ಎಂದು ಗುರುತಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಯ) ಕಾಯ್ದೆಯಡಿಯಲ್ಲಿ ಆತನನ್ನು ಬಂಧನ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೆ ಒಳಗಾಗಿರುವ ಆರು ಆರೋಪಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಶನಿವಾರ ಜಾಕೀರ್ ಹುಸೈನ್ ಶೇಕ್ ಎಂಬ ಆರೋಪಿಯನ್ನು ಬಂಧನ ಮಾಡಲಾಗಿದೆ. ದೆಹಲಿ ವಿಶೇಷ ಪೊಲೀಸ್ ವಿಭಾಗ ಈ ಜಾಕೀರ್ ಹುಸೈನ್ ಶೇಕ್ನ ವಿಚಾರಣೆಯನ್ನು ನಡೆಸಿದ ಸಂದರ್ಭದಲ್ಲಿ ರಿಸ್ವಾನ್ ಇಬ್ರಾಹಿಂ ಮೋಮಿನ್ ಹೆಸರು ಹೊರಬಿದ್ದಿದ್ದು ಈ ಹಿನ್ನೆಲೆ ಬಂಧನ ಮಾಡಲಾಗಿದೆ ಎಂದು ಹೇಳಲಾಗಿದೆ.
"ಜಾಕೀರ್ ಹುಸೈನ್ ಶೇಕ್ ಅನ್ನು ಬಂಧನ ಮಾಡಲಾದ ಬೆನ್ನಲ್ಲೇ ಜಾಕೀರ್ ಹುಸೈನ್ ಶೇಕ್ನೊಂದಿಗೆ ಸಂಪರ್ಕದಲ್ಲಿ ಇದ್ದ ಮೊಬೈಲ್ ಫೋನ್ ಅನ್ನು ಮುಂಬ್ರಾ ನಿವಾಸಿ ರಿಸ್ವಾನ್ ಇಬ್ರಾಹಿಂ ಮೋಮಿನ್ ನಾಶ ಮಾಡಿದ್ದಾನೆ," ಎಂದು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳವು (ಎಟಿಎಸ್) ಆರೋಪ ಮಾಡಿದೆ. ಆದರೂ ಬಳಿಕ ರಿಸ್ವಾನ್ ಇಬ್ರಾಹಿಂ ಮೋಮಿನ್ ಈ ಭಯೋತ್ಪಾದನಾ ದಾಳಿ ಸಂಚು ಪ್ರಕರಣದಲ್ಲಿ ನಂಟನ್ನು ಹೊಂದಿರುವ ಬಗ್ಗೆ ಮಾಹಿತಿ ಪಡೆದು, ರಿಸ್ವಾನ್ ಇಬ್ರಾಹಿಂ ಮೋಮಿನ್ ಅನ್ನು ಆತನ ನಿವಾಸದಲ್ಲೇ ವಶಕ್ಕೆ ಪಡೆದಿದೆ. ಬಳಿಕ ವಿಚಾರಣೆ ನಡೆಸಿ ಬಂಧನ ಮಾಡಿದೆ ಎಂದು ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ