ಸೇನಾ ವಾಹನಕ್ಕೆ ಬೆಂಕಿ ತಗುಲಿ 4 ಯೋಧರು ಸಜೀವದಹನ!

ಶುಕ್ರವಾರ, 21 ಏಪ್ರಿಲ್ 2023 (08:12 IST)
ಶ್ರೀನಗರ : ಸೇನಾ ಟ್ರಕ್ಗೆ ಬೆಂಕಿ ತಗುಲಿದ ಪರಿಣಾಮ ನಾಲ್ವರು ಯೋಧರು ಸಜೀವದಹನವಾಗಿರುವ ಭೀಕರ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ನಡೆದಿದೆ.
 
ಘಟನೆ ಗುರುವಾರ ಭಟ ಧುರಿಯನ್ ಪ್ರದೇಶದ ಬಳಿ ನಡೆದಿರುವುದಾಗಿ ವರದಿಗಳು ತಿಳಿಸಿವೆ. ಮೂಲಗಳ ಪ್ರಕಾರ ಸಿಡಿಲು ಬಡಿದ ಪರಿಣಾಮ ಯೋಧರನ್ನು ಸಾಗಿಸಲಾಗುತ್ತಿದ್ದ ಟ್ರಕ್ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. 

ಸ್ಥಳಕ್ಕೆ ಸೇನೆ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ